Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಬುಡಬುಡಿಕೆ
  4. ‘‘ಇನ್ನು ಕಾಸ್ಮೀರದ ಯಾಪಲ್ ಕೆಜಿಗೆ 10...

‘‘ಇನ್ನು ಕಾಸ್ಮೀರದ ಯಾಪಲ್ ಕೆಜಿಗೆ 10 ರೂಪಾಯಿ ಸಾರ್....’’

ಚೇಳಯ್ಯಚೇಳಯ್ಯ11 Aug 2019 12:19 AM IST
share
‘‘ಇನ್ನು ಕಾಸ್ಮೀರದ ಯಾಪಲ್ ಕೆಜಿಗೆ 10 ರೂಪಾಯಿ ಸಾರ್....’’

‘‘ಸಾರ್...ಕಾಸ್ಮೀರ ಸೊಸಂತ್ರ ಆಯ್ತಂತಲ್ಲ ಸಾರ್....ಪಾಕಿಸ್ತಾನಕ್ಕೆ ಸೈನ್ಯ ನುಗ್ಗಿಸಿ ಕಾಸ್ಮೀರವನ್ನು ಮೋದಿ ಸಾಹೇಬ್ರು ಬುಡುಸ್ಕೊಂಡ್ರಂತೆ....’’ ರಿಕ್ಷಾ ಡ್ರೈವರ್ ಅಂದಿದ್ದೇ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಪತ್ರಕರ್ತ ಎಂಜಲು ಕಾಸಿಯ ತಲೆ ಧಿಂ ಎಂದಿತು.

‘‘ಯಾವ ಕಾಶ್ಮೀರ....ಯಾವ ಸ್ವಾತಂತ್ರ...’’ ಕಾಸಿ ಹೊಸ ಸುದ್ದಿಯೊಂದು ಸಿಕ್ಕಿಯೇ ಬಿಟ್ಟಿತೆಂಬಂತೆ ಪೆನ್ನು ಪುಸ್ತಕ ಕೈಗೆತ್ತಿಕೊಂಡ.

‘‘ಏನ್ ಸಾರ್...ನೋಡಿದ್ರೆ ಎಜುಕೇಟೆಡ್ ಥರ ಕಾಣ್ತೀರಾ....ಮೋದಿ ಸಾಹೇಬ್ರು ಪಾಕಿಸ್ತಾನಕ್ಕೆ ಇಕ್ತಾ ಇರೋ ಇಸಯಾನೇ ಗೊತ್ತಿಲ್ಲ ಅಂತೀರಾ...’’ ಚಾಲಕನಿಗೆ ಸಖತ್ ಬೇಜಾರಾಯಿತು.

ಕಾಸಿಗೆ ಸಂಕೋಚವಾಯಿತು. ‘‘ನೀವೇ ಒಂದಿಷ್ಟು ವಿವರಿಸಿ ಹೇಳಿ...’’ ಕಾಸಿ ರಿಕ್ಷಾ ಚಾಲಕನ ಜೊತೆ ಅಂತರ್‌ರಾಷ್ಟ್ರೀಯ ವಿಷಯ ಚರ್ಚೆಗಿಳಿದ.

‘‘ನೋಡೀ...ಈ ನೆಹರೂ ಇದಾರಲ್ಲ...ರಾಹುಲ್‌ಗಾಂಧಿ ತಾತಾ....ಆತ ಇಡೀ ಕಾಸ್ಮೀರವನ್ನು ನೀವೇ ಇಟ್ಕೊಳ್ಳಿ ಎಂದು ಪಾಕಿಸ್ತಾನಕ್ಕೆ ಬರೆದುಕೊಟ್ಟು ಬಿಟ್ಟಿದ್ನಂತೆ...ಪಾಕಿಸ್ತಾನದೋರು ನಮ್ಮ ಕಾಸ್ಮೀರದ ಆ್ಯಪಲ್‌ಗಳನ್ನೆಲ್ಲ ತಿಂದು ಕೊಬ್ಬಿ ಭಾರತದ ಸೈನಿಕರ ವಿರುದ್ಧ ದಾಳಿ ಮಾಡ್ತಾ ಇದ್ರಂತೆ...ಆದರೆ ಮೋದಿ ಸಾಬ್ರು ಬಂದ್ರು ನೋಡಿ....ಸೈನ್ಯ ತಗೊಂಡು ಅದೇನೋ ಸರ್ಜಿಕಲ್ ಸ್ಟ್ರೈಕ್ ಅಂತ ಮಾಡಿ....ಕಾಸ್ಮೀರವನ್ನು ವಸ ಪಡಿಸಿಕೊಂಡೇ ಬುಟ್ರಂತೆ....ಸರ್ಜಿಕಲ್ ಸ್ಟ್ರೈಕ್ ಅಂದ್ರೆ ಗೊತ್ತಾ....ನಿಮ್ಗೆ...? ಅಯ್ಯೋ ನಾನು ಖುದ್ದು ನೋಡಿ ನಮ್ ಸೈನಿಕರಿಗೆ ಸೆಲ್ಯೂಟ್ ಹೊಡೆದು ಬಂದೆ...’’

‘‘ಅಂದ್ರೆ... ಸರ್ಜಿಕಲ್ ಸ್ಟ್ರೈಕ್ ನಡೆಯುವಾಗ ನೀವು ಗಡಿಗೆ ಹೋಗಿದ್ರಾ?’’ ಕಾಸಿ ಅಚ್ಚರಿಯಿಂದ ಕೇಳಿದ.

‘‘ಏ...ಹಂಗೇನಿಲ್ಲ ಬುಡ್ರೀ....ನಮ್ಮ ನರ್ತಕಿ ಥಿಯೇಟ್ರಲ್ಲಿ ಆ ಬಗ್ಗೆ ಸಿನೆಮಾ ಹಾಕಿದ್ರು....ಅದರಲ್ಲಿ ನೋಡ್ದೆ....’’ ಚಾಲಕ ಸ್ಪಷ್ಟನೆ ನೀಡಿದ.

‘‘ಕಾಸ್ಮೀರ ಸ್ವಾತಂತ್ರ ಆಗಿರೋದ್ರಿಂದ ನಮಗೇನೇನು ಲಾಭವಾಯಿತು...’’ ಕಾಸಿ ಇನ್ನಷ್ಟು ವಿವರವಾಗಿ ಕೇಳಿದ.

 ‘‘ನೋಡ್ರಿ...ಈವರೆಗೆ ಕಾಸ್ಮೀರದಲ್ಲಿ ಬೆಳೀತಿದ್ದ ಆ್ಯಪಲ್‌ನ್ನು ತಿಂದು, ಉಳಿದುದನ್ನು ನಮಗೆ ಮಾರಿ ಪಾಕಿಸ್ತಾನದೋರು ದುಡ್ಡು ಮಾಡ್ತಾ ಇದ್ರು....ಈಗ ನೋಡಿ...ಕೆಜಿಗೆ ನೂರು ರೂಪಾಯಿ ಇದ್ದ ಆ್ಯಪಲ್ ಇನ್ನು ಮುಂದೆ ನಮ್ಮೂರ ಸಂತೇಲಿ ಕೆಜಿಗೆ 10 ರೂಪಾಯಿಯ ಹಾಗೆ ಮಾರ್ತಾರಂತೆ....’’ ಚಾಲಕ ನೀರಿಳಿಸುತ್ತಾ ಹೇಳಿದ.

‘‘ನಿಜಾನ?’’ ಕಾಸಿ ಅಚ್ಚರಿಯಿಂದ ಕೇಳಿದ. ಆತ ಆ್ಯಪಲ್ ತಿನ್ನದೆ ವರ್ಷ ಎರಡಾಗಿತ್ತು.

 ‘‘ಹೌದ್ರೀಯಪ್ಪ. ಮೋದೀನೇ ಟೀವಿಯಾಗೆ ಬಂದು ಹೇಳಿದ್ದಾರೆ ಅಂತ ನಮ್ಮ ಸಾಕೇಲಿ ಹೇಳಿದ್ದಾರೆ....’’

‘‘ಯಾವ ಬ್ಯಾಂಕ್ ಶಾಖೆ....?’’ ಕಾಸಿ ಅರ್ಥವಾಗದೆ ಕೇಳಿದ.

‘‘ಏ....ಆ ಸಾಕೆ ಅಲ್ಲಾರಿ. ಇದು ಆರೆಸ್ಸೆಸ್ ಸಾಕೆ. ನನ್ ಮಗಾ ದುಡಿಯೋಕೆ ಹೋಗಲ್ಲಾರಿ. ಆದ್ರೆ ದಿನಾ ಸಾಕೆಗೆ ಹೋಗಿ ಕಬಡ್ಡಿ ಆಡಿ ಬರ್ತಾನೇರಿ...ಅವನೇ ಇದನ್ನು ನನಗೆ ಹೇಳಿದ್ದು’’ ಚಾಲಕ ಕಾಸಿಯ ಅಜ್ಞಾನಕ್ಕೆ ದುಃಖ ವ್ಯಕ್ತಪಡಿಸಿದ.

‘‘ಕಾಶ್ಮೀರದ ಬಗ್ಗೆ ಮತ್ತೇನೇನು ಹೇಳಿದ...’’ ಕಾಸಿ ಕುತೂಹಲದಿಂದ ಕೇಳಿದ.

‘‘ನೋಡ್ರಿ...ಮೊದಲು ಕಾಸ್ಮೀರದಿಂದ ನುಸುಳುವ ಪಾಕಿಸ್ತಾನಿ ಉಗ್ರರನ್ನು ಓಡಿಸುವುದಕ್ಕೆ ಸೈನಿಕರನ್ನು ಇಡಬೇಕಾಗಿತ್ತು...ಇನ್ನು ಆ ಚಿಂತಿ ಇಲ್ಲ. ಅದಕ್ಕಾಗಿ ತುಂಬಾ ಖರ್ಚಾಗ್ತಾ ಇತ್ತು. ಖರ್ಚಾಗುತ್ತಿದ್ದ ಆ ಹಣಾನೆಲ್ಲ ನಮ್ಮ ಬ್ಯಾಂಕ್ನಾಗೆ ಹಾಕ್ತಾರಂತೆ...’’ ಚಾಲಕ ಸಂಭ್ರಮದಿಂದ ಹೇಳಿದ.

‘‘ಈಗ ಯಾಕೆ ನುಸುಳೋದಿಲ್ಲ...’’ ಕಾಸಿ ಕೇಳಿದ.

‘‘ಯಾಕೆ ಅಂದ್ರೆ...ಈಗ ಕಾಸ್ಮೀರದಾಗೆ ನುಸುಳೋದಕ್ಕೆ ಕಾಸ್ಮೀರನೇ ಇಲ್ವಲ್ಲ...ಕಾಸ್ಮೀರಾನ ಮೋದಿಯೋರು ಬಾರತದೊಳಗೆ ಇಲೀನ ಮಾಡಿ ಬಿಟ್ಟಿದ್ದಾರಲ್ಲ....ಕಾಸ್ಮೀರವೇ ಇಲ್ಲ ಅಂದ ಮೇಲೆ ಕಾಸ್ಮೀರವನ್ನು ಕಾಯೋದಕ್ಕೆ ಸೈನಿಕರೇ ಅಗತ್ಯವಿಲ್ಲ....ನೋಡ್ರಿ ದೇಸಕ್ಕೆ ಏಟೊಂದು ಉಳಿತಾಯ....?’’ ಎನ್ನುತ್ತಾ ಮೋದಿಯೋರ ಸಾಹಸ ನೆನೆದು ಒಂದು ಕೈಯಲ್ಲಿ ಮೀಸೆ ತಿರುವ ತೊಡಗಿದ. ‘‘ನಿಜ. ಆದರೆ ಇದರಿಂದ ಅರ್ಧಕ್ಕರ್ಧ ಸೈನಿಕರು ಕೆಲಸ ಕಳೆದುಕೊಳ್ಳುವ ಅಪಾಯವಿಲ್ವಾ? ನಿರುದ್ಯೋಗ ಹೆಚ್ಚಲ್ವಾ?’’ ಕಾಸಿ ಆತಂಕದಿಂದ ಕೇಳಿದ. ‘‘ನೋಡ್ರಿ....ಆ ಸೈನಿಕರ ಅಕೌಂಟಿಗೆ ಮೋದಿಯವರು ಉಳಿತಾಯದ ಹಣ ಹಾಕ್ಬುಡ್ತಾರೆ...ಹಾಗೆ ಕಾಸ್ಮೀರದಲ್ಲಿದ್ದ ಪಾಕಿಸ್ತಾನದೋರನ್ನೆಲ್ಲ ಓಡಿಸಿ ಅವರ ಮನೆಯನ್ನೆಲ್ಲ ಈ ಸೈನಿಕರಿಗೆ ಮೋದಿ ಸಾಹೇಬ್ರು ಬರ್ಕೊಡ್ತಾರೆ....’’ ಚಾಲಕ ಮೋದಿಯವರ ದೂರದೃಷ್ಟಿಯನ್ನು ವಿವರಿಸಿದ. ‘‘ಹಂಗಾದ್ರೆ ಇನ್ನು ಆ್ಯಪಲ್ ನಮಗೆ ಟೊಮೆಟೋ ದರದಲ್ಲಿ ಸಿಗತ್ತೆ ಎಂದಾಯಿತು...’’ ಕಾಸಿ ಸಂಭ್ರಮದಿಂದ ಮತ್ತೊಮ್ಮೆ ವಿಚಾರಿಸಿದ.

 ‘‘ಅಷ್ಟೇ ಅಲ್ಲಾರಿ....ಕಾಸ್ಮೀರದಲ್ಲಿರೋ ಉಡ್ಗೀರೆಲ್ಲ ಪಾಕಿಸ್ತಾನದಲ್ಲಿರೋ ತಮ್ಮ ಗಂಡಸರಿಗೆ ತಲಾಕ್ ಕೊಡೋ ಹಾಗೆ ಮೋದಿಯೋರು ಕಾನೂನು ತಂದಿದ್ದಾರಂತೆ... ಕಾಸ್ಮೀರದಲ್ಲಿರೋ ಉಡ್ಗೀರೆಲ್ಲ ಪಾಪ...ಬೋ ಕಸ್ಟ ಪಡ್ತಾ ಇದ್ರಂತೆ....ಅವರಿಗೂ ಸೋಸಂತ್ರ ಸಿಕ್ತಂತೆ....’’ ಚಾಲಕ ತನ್ನ ಜನರಲ್ ನಾಲೆಜ್‌ನ್ನು ಪ್ರದರ್ಶಿಸಿದ.

‘‘ಕಾಶ್ಮೀರಕ್ಕೆ ಸ್ವತಂತ್ರ ಸಿಕ್ಕಿದ ಕಾರಣದಿಂದ ಡೀಸೆಲ್‌ಗೆ ಬೆಲೆ ಕಡಿಮೆ ಆಗಬಹುದಾ....’’ ಕಾಸಿ ಪ್ರಶ್ನೆಯನ್ನು ತಿರುಗಿಸಿದ.

ಈಗ ಚಾಲಕ ಮಂಕಾದ ‘‘ನೋಡ್ರೀ....ದೇಸ ಅಂದ್ಮೇಲೆ ಸ್ವಲ್ಪ ಸಹಿಸ್ಕೋಬೇಕು. ಡೀಸೆಲ್‌ಗೆ ಕಸ್ಟ ಆಗಿದೆ. ಮನೆಯಲ್ಲಿಸಮಸ್ಯೆ ಆಗಿದೆ. ಆದ್ರೆ ಮೋದಿಯೋರು ನೋಡಿ ಮನೆ ಮಠ ಬಿಟ್ಟು ದೇಸಕ್ಕಾಗಿ ಏನೇನೆಲ್ಲ ಮಾಡ್ತಾ ಅವ್ರೇ....ಇನ್ನು ಪಾಕಿಸ್ತಾನಾನ ಸರ್ಜಿಕಲ್ ಸ್ಟ್ರೈಕ್ ನಡೆಸಿ ಸೊಸಂತ್ರಗೊಳಿಸಬೇಕು. ಆಮೇಲೆ ಚೀನಾ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಬೇಕು....ಹಿಂಗೆ ಅವರೇ ಇಷ್ಟೆಲ್ಲ ಕಸ್ಟದಾಗೆ ಇರುವಾಗ ನಾವು ಡೀಸೆಲ್ ಬೆಲೆ ಬಗ್ಗೆ ಕೇಳೋಕಾಗತ್ತ? ಅದನ್ನೆಲ್ಲ ನಾವು ಸಿದ್ದರಾಮಯ್ಯ, ಕುಮಾರಸಾಮಿ ಹತ್ರ ಕೇಳ್ಬೇಕು....ನೋಡ್ರಿ ಈ ಸಿದ್ದರಾಮಯ್ಯ, ಕುಮಾರಸಾಮಿಯೋರಿಗೆ ಮೋದಿಯೋರ ಥರ ಕಾಸ್ಮೀರ, ಪಾಕಿಸ್ತಾನ, ಚೀನಾ ಅಂತ ಸಮಸ್ಯೆ ಇದೆಯಾ? ಸರ್ಜಿಕಲ್ ಸ್ಟ್ರೈಕ್ ನಡೆಸೋ ಕಸ್ಟ ಇದೆಯಾ? ಹೀಗಿರುವಾಗ ಡೀಸೆಲ್, ಪೆಟ್ರೋಲ್ ಬೆಲೆ ಇಳಿಸೋದಕ್ಕೆ ಆಗಲ್ವಾ ಇವರಿಗೆ...?’’

‘‘ಹೂಂ ಮತ್ತೆ...’’ ಕಾಸಿಗೂ ಹೌದೆನಿಸಿತು. ರಿಕ್ಷಾದಿಂದ ಇಳಿದವನೇ ನೂರು ರೂ. ನೋಟು ಕೊಟ್ಟ. ‘‘ಇನ್ನೊಂದೈವತ್ತು ಕೊಡಿ ಸಾರ್...’’ ಚಾಲಕ ಹೇಳಿದ.

‘‘ಮೀಟರ್ ಚಾರ್ಜ್ ಬರೇ ಐವತ್ತು...ನೀವು ನೂರೈವತ್ತು ಕೇಳ್ತಾ ಇದ್ದೀರಲ್ಲ....’’

‘‘ಈಗಸ್ಟೇ ಡೀಸೆಲ್ ರೇಟ್ ಬಗ್ಗೆ ನೀವೇ ಹೇಳಿದ್ರಿ. ಈ ರೇಟಿಗೆ ಮೀಟರ್ ಚಾರ್ಜ್ ಸಾಕಾಗಲ್ಲ ಸಾರ್. ಪಾಪ ಮೋದಿಯೋರು ಏನು ಅಂತಾ ನೋಡ್ಕೋಬೇಕು...ನೀವೆಲ್ಲ ದೇಸಕ್ಕಾಗಿ ಮೀಟರ್ ಚಾರ್ಜ್‌ಗೆ ಒಂದಿಷ್ಟು ಸೇರಿಸಿ ಕೊಡಬೇಕು ಸಾರ್....’’ ಎಂದವನೇ ಒಮ್ಮೆಲೆ ಜೋರಾಗಿ ‘ಜೈ ಶ್ರೀರಾಮ್’ ಎಂದು ಹೂಂಕರಿಸಿದ. ತಕ್ಷಣವೇ ಕಿಸೆಯಿಂದ 50 ರೂಪಾಯಿ ತೆಗೆದು ಕೊಟ್ಟ ಕಾಸಿ ‘ಬದುಕಿದೆಯಾ ಬಡ ಜೀವ’ ಎಂದು ಏದುಸಿರು ಬಿಡುತ್ತಾ ತನ್ನ ಕಚೇರಿ ಸೇರಿದ.

share
ಚೇಳಯ್ಯ
ಚೇಳಯ್ಯ
Next Story
X