ದಕ್ಷಿಣ ರೈಲ್ವೆ ವಿಭಾಗದ ರೈಲು ಸಂಚಾರ ರದ್ದು
ಉಡುಪಿ, ಆ.11: ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆ ಯಲ್ಲಿ ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ಕೆಲವು ದಕ್ಷಿಣ ರೈಲ್ವೆ ವಿಭಾಗದ ರೈಲುಗಳನ್ನು ರದ್ದುಪಡಿಸಲಾಗಿದೆ.
ಆ.11ರ ರೈಲು ನಂಬರ್ 10215 ಮಡ್ಗಾಂವ್ -ಎರ್ನಾಕುಲಂ ಎಕ್ಸ್‌ಪ್ರೆಸ್, 22150 ಪುಣೆ- ಎರ್ನಾಕುಲಂ ಹಾಗೂ ಆ.12ರ 10216 ಎರ್ನಾಕುಲಂ- ಮಾಡ್ಗಾಂವ್ ಎಕ್ಸ್‌ಪ್ರೆಸ್, 11098 ಎರ್ನಾಕುಲಂ -ಪುಣೆ ಎಕ್ಸ್‌ಪ್ರೆಸ್, 19577 ತಿರಿನವೆಲ್ಲಿ- ಜಮ್‌ನಗರ್ ಎಕ್ಸೆಪ್ರೆಸ್, ಆ.13ರ 12283 ಎರ್ನಾಕುಲಂ- ನಿಜಾಮುದ್ದೀನ್ ಎಕ್ಸ್‌ಪ್ರೆಸ್, 22149 ಎರ್ನಾಕುಲಂ -ಪುಣೆ ಪೂರ್ಣ ಎಕ್ಸ್‌ಪ್ರೆಸ್ ಮತ್ತು ಆ.14ರ 12483 ಕೊಚುವೆಲ್ಲಿ- ಅಮೃತ್‌ಸರ ಎಕ್ಸೆಪ್ರೆಸ್ ರೈಲನ್ನು ರದ್ದುಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





