ತಗ್ಗಿದ ಪ್ರವಾಹ: ಬಂಟ್ವಾಳ ತಾಲೂಕಿನ ಎಲ್ಲಾ ರಸ್ತೆಗಳೂ ಸಂಚಾರಕ್ಕೆ ಮುಕ್ತ

ಬಂಟ್ವಾಳ: ರವಿವಾರ ಸಂಜೆ ನೇತ್ರಾವತಿ ನದಿ 6.9 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದು, ಅಪಾಯದ ಮಟ್ಟ 8.5 ಮೀ. ಶನಿವಾರ ಬೆಳಗ್ಗೆ ನದಿ 11.6 ಮೀಟರ್ ಎತ್ತರಕ್ಕೆ ಪ್ರವಹಿಸಿ, ಬಂಟ್ವಾಳ ಪೇಟೆಯೆಡೆಗೆ ನುಗ್ಗಿತ್ತು.
ಪಾಣೆಮಂಗಳೂರು 115, ಬಂಟ್ವಾಳ ಕಸಬಾ 5, ಕಡೇಶ್ವಾಲ್ಯ 7, ಬರಿಮಾರು 3, ಅಮ್ಟಾಡಿ 16, ಬಿಮೂಡ 67, ಪುದು 18, ಸಜೀಪನಡು 22, ಪೆರ್ನೆ 10, ಸಜೀಪಮುನ್ನೂರು 4, ಮಣಿನಾಲ್ಕೂರು 3 ಸೇರಿದಂತೆ ಸುಮಾರು 400ರಷ್ಟು ಮನೆಗಳು ಪ್ರವಾಹಬಾಧಿತವಾಗಿದ್ದರೆ, ಶನಿವಾರ ರಾತ್ರಿವರೆಗೆ 1408 ಮಂದಿಯನ್ನು ಸ್ಥಳಾಂತರಿಸಲಾಗಿತ್ತು. ಇವರಲ್ಲಿ 1360ರಷ್ಟು ಮಂದಿ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದರೆ, 76 ಮಂದಿ ಬಂಟ್ವಾಳದ ಐಬಿ ಮತ್ತು ಪಾಣೆಮಂಗಳೂರಿನ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದರು.
ಬಂಟ್ವಾಳ. ಬಿ.ಸಿ.ರೋಡ್ ನಿಂದ ಬರುವ ಎಲ್ಲ ರಸ್ತೆಗಳಿಂದಲೂ ಪೇಟೆಗೆ ಆಗಮಿಸಬಹುದು. ಶನಿವಾರ ಬಂದ್ ಆಗಿದ್ದ ಬಂಟ್ವಾಳ – ಬೆಳ್ತಂಗಡಿ ರಸ್ತೆ ಸಹಿತ ತಾಲೂಕಿನ ಇತರ ರಸ್ತೆಗಳೂ ಭಾನುವಾರ ಸಂಚಾರಕ್ಕೆ ಮುಕ್ತವಾಗಿದೆ.










