ನ್ಯಾಟೋ ಯುದ್ಧ ವಿಮಾನವನ್ನು ಓಡಿಸಿದ ರಶ್ಯ ಯುದ್ಧ ವಿಮಾನ
ಮಾಸ್ಕೋ, ಆ. 14: ಬಾಲ್ಟಿಕ್ ಸಮುದ್ರದಲ್ಲಿರುವ ತಟಸ್ಥ ಜಲಪ್ರದೇಶದ ಮೇಲಿನ ಆಕಾಶದಲ್ಲಿ ರಶ್ಯದ ರಕ್ಷಣಾ ಸಚಿವ ಸರ್ಗೀ ಶೊಯಿಗು ಅವರನ್ನು ಒಯ್ಯುತ್ತಿದ್ದ ವಿಮಾನವೊಂದರ ಸಮೀಪಕ್ಕೆ ಬರುತ್ತಿದ್ದ ನ್ಯಾಟೋದ ಯುದ್ಧ ವಿಮಾನವೊಂದನ್ನು ರಶ್ಯದ ಯುದ್ಧ ವಿಮಾನವು ಅಟ್ಟಿಸಿಕೊಂಡು ಹೋಗಿದೆ ಎಂದು ‘ಟಾಸ್’ ಸುದ್ದಿ ಸಂಸ್ಥೆ ಮಂಗಳವಾರ ವರದಿ ಮಾಡಿದೆ.
ರಶ್ಯದ ಬಾಲ್ಟಿಕ್ ವಲಯವಾಗಿರುವ ಕಲಿನಿಂಗರ್ಡ್ನಿಂದ ಶೊಯಿಗು ಅವರ ವಿಮಾನ ಮಾಸ್ಕೋಗೆ ಮರಳುತ್ತಿತ್ತು. ಆ ವಿಮಾನದಲ್ಲಿ ‘ಟಾಸ್’ ವರದಿಗಾರರೊಬ್ಬರಿದ್ದರು.
ಲಿಥುವೇನಿಯದಲ್ಲಿರುವ ಸ್ಪೇನ್ನ ಎಫ್-18 ಯುದ್ಧ ವಿಮಾನವೊಂದು ಶೊಯಿಗು ಅವರಿದ್ದ ವಿಮಾನದ ಸಮೀಪ ಬರಲು ಪ್ರಯತ್ನಿಸಿತು. ಆಗ ಸಚಿವರ ಬೆಂಗಾವಲಿನಲ್ಲಿ ಹೋಗುತ್ತಿದ್ದ ಎರಡು ರಶ್ಯದ ಎರಡು ಎಸ್ಯು-27 ಯುದ್ಧವಿಮಾನಗಳ ಪೈಕಿ ಒಂದು ಎಫ್-18 ವಿಮಾನವನ್ನು ದೂರ ಓಡಿಸಿತು ಎಂದು ಸುದ್ದಿ ಸಂಸ್ಥೆ ತಿಳಿಸಿದೆ.
Next Story