ವೆಸ್ಟ್ ಇಂಡೀಸ್ 158/2
ಮೂರನೇ ಏಕದಿನ
ಪೋರ್ಟ್ ಆಫ್ ಸ್ಪೇನ್, ಆ.14: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಇಲ್ಲಿ ನಡೆದ ಮೂರನೇ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಪಂದ್ಯಕ್ಕೆ ಮಳೆ ಅಡ್ಡಿಯಾ ದಾಗ ವಿಂಡೀಸ್ 22 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿದೆ. ಟಾಸ್ ಜಯಿಸಿದ ವೆಸ್ಟ್ ಇಂಡೀಸ್ ನಾಯಕ ಜೇಸನ್ ಹೋಲ್ಡರ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಇನಿಂಗ್ಸ್ ಆರಂಭಿಸಿದ ಕ್ರಿಸ್ ಗೇಲ್ ಹಾಗೂ ಲೂಯಿಸ್ ಮೊದಲ ವಿಕೆಟ್ ಜೊತೆಯಾಟದಲ್ಲಿ 115 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು.
ಗೇಲ್ ಅರ್ಧಶತಕ(72 ರನ್, 41 ಎಸೆತ, 8 ಬೌಂಡರಿ, 5 ಸಿಕ್ಸರ್)ಸಿಡಿಸಿ ಮಿಂಚಿದರು. ಲೂಯಿಸ್ 43 ರನ್(29 ಎಸೆತ, 5 ಬೌಂಡರಿ, 3 ಸಿಕ್ಸರ್)ಗೇಲ್ಗೆ ಉತ್ತಮ ಸಾಥ್ ನೀಡಿದರು.
ಹೋಪ್(19)ಹಾಗೂ ಹೆಟ್ಮೆಯರ್(18) ಕ್ರೀಸ್ ಕಾಯ್ದುಕೊಂಡಿದ್ದಾರೆ.
ಅಹ್ಮದ್(1-43) ಹಾಗೂ ಚಹಾಲ್(1-21) ತಲಾ ಒಂದು ವಿಕೆಟ್ ಪಡೆದಿದ್ದಾರೆ.
Next Story