Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ದೇಶಭಕ್ತಿ ಚಿತ್ರಗಳ ಹೀರೋಗೆ...

ದೇಶಭಕ್ತಿ ಚಿತ್ರಗಳ ಹೀರೋಗೆ ಸ್ವಾತಂತ್ರ್ಯೋತ್ಸವದಂದೇ ಬರ್ತ್ ಡೇ!

ಶಶಿಕರ ಪಾತೂರುಶಶಿಕರ ಪಾತೂರು15 Aug 2019 12:14 AM IST
share
ದೇಶಭಕ್ತಿ ಚಿತ್ರಗಳ ಹೀರೋಗೆ ಸ್ವಾತಂತ್ರ್ಯೋತ್ಸವದಂದೇ ಬರ್ತ್ ಡೇ!

ಆಗಸ್ಟ್ 15ಕ್ಕೆ ಅರ್ಜುನ್ ಸರ್ಜಾ ಅವರಿಗೆ ವರ್ಷ 54 ತುಂಬುತ್ತದೆ! ಅರೇ ಮೊನ್ನೆ ಮೊನ್ನೆ ಲವ್ವರ್ ಬಾಯ್ ತರಹ ಪ್ರೇಮಗೀತೆ ಹಾಡಿದವರು ಇಷ್ಟು ಬೇಗ ಇಷ್ಟೆಲ್ಲ ವಯಸ್ಸು ದಾಟಿ ಬಿಟ್ಟರಾ ಎನ್ನುವ ಸಂದೇಹ ಸಹಜ. ಆದರೆ ಆ್ಯಕ್ಷನ್ ಕಿಂಗ್ ಎನ್ನುವ ಬಿರುದು ಇದ್ದರೂ, ಪ್ರೇಮಚಿತ್ರಗಳಲ್ಲಿ ಯಶಸ್ಸು ಪಡದಿದ್ದರೂ ಎಲ್ಲ ಭಾವಗಳಲ್ಲಿ ಹೇಗೆ ಪ್ರೇಕ್ಷಕರನ್ನು ಗೆಲ್ಲಬಲ್ಲನೆಂದು ತೋರಿಸಿಕೊಟ್ಟವರು ಅರ್ಜುನ್ ಸರ್ಜಾ. ಅದಕ್ಕೆ ಪ್ರಸ್ತುತ ಯಶಸ್ವೀ ಪ್ರದರ್ಶನ ಕಾಣುತ್ತಿರುವ ಕುರುಕ್ಷೇತ್ರ ಕೂಡ ಉದಾಹರಣೆ. ಈ ಎಲ್ಲ ವಿಚಾರಗಳ ಬಗ್ಗೆ ಸಣ್ಣದೊಂದು ಅವಲೋಕನ ಇದು.

ಕುರುಕ್ಷೇತ್ರ ತೆರೆಕಂಡ ಮೇಲೆ ಮತ್ತೆ ಅರ್ಜುನ್ ಸರ್ಜಾ ಸುದ್ದಿಯಲ್ಲಿದ್ದಾರೆ. ನೂರಾರು ಕಲಾವಿದರನ್ನು ಹೊಂದಿರುವ ಬೃಹತ್ ಚಿತ್ರದಲ್ಲಿ ಹಲವಾರು ಸ್ಟಾರ್ ಗಳ ನಡುವೆ ಇಂದು ಎಲ್ಲರಿಂದ ಗುರುತಿಸಲ್ಪಡುತ್ತಿರುವ ನಟನಿದ್ದರೆ ಅದು ಅರ್ಜುನ್ ಸರ್ಜ. ಅದಕ್ಕೆ ಕಾರಣವಾಗಿರುವುದು ಕುರುಕ್ಷೇತ್ರದಲ್ಲಿ ಅವರು ನಿರ್ವಹಿಸಿರುವ ಕರ್ಣನ ಪಾತ್ರ.

ಆ್ಯಕ್ಷನ್ ಕಿಂಗ್ ನಿಂದ ಸುಪರ್ಬ್ ಸೆಂಟಿಮೆಂಟ್ ಸನ್ನಿವೇಶ
ಅರ್ಜುನ್ ಸರ್ಜಾ ಚಿತ್ರರಂಗಕ್ಕೆ ಬಾಲನಟನಾಗಿ ಕಾಲಿಡುವಾಗಲೇ ಆ್ಯಕ್ಷನ್ ಹೀರೋ ಆಗಿ ಗುರುತಿಸಿಕೊಂಡವರು. ಸಿಂಹದ ಮರಿ ಸೈನ್ಯ ಚಿತ್ರದಲ್ಲಿ ಅವರ ಸಾಹಸ ದೃಶ್ಯಗಳೇ ಸಿನಿಮಾದ ಹೈಲೈಟ್ ಆಗಿದ್ದವು. ಆದರೆ ಪ್ರೇಮ ಯುದ್ಧ, ಸ್ನೇಹದ ಕಡಲಲ್ಲಿ, ಪ್ರೇಮಾಗ್ನಿ, ಸ್ನೇಹದ ಕಡಲಲ್ಲಿ, ಶಿವನಾಗ, ಪ್ರತಾಪ್ ಚಿತ್ರಗಳಲ್ಲಿ ಅವರು ಲವ್ವರ್ ಬಾಯ್ ಆಗಿ ಜತೆಗೆ ಅದಕ್ಕೆ ತಕ್ಕಂತೆ ಸೆಂಟಿಮೆಂಟ್ ದೃಶ್ಯಗಳಲ್ಲಿಯೂ ಕಾಣಿಸಿಕೊಂಡು ಗಮನಸೆಳೆದಿದ್ದರು. 

ಯಾವಾಗ ತಮಿಳಲ್ಲಿ 'ಜಂಟಲ್ ಮ್ಯಾನ್' ಚಿತ್ರ ಸುಪರ್ ಹಿಟ್ ಆಯಿತೋ ಅಲ್ಲಿಂದ ಅವರು ಕನ್ನಡದತ್ತ ಬರುವುದನ್ನೇ ಕಡಿಮೆ ಮಾಡಿದರು. ಆದರೆ ತಮಿಳಲ್ಲಿ ಸುಪರ್ ಹಿಟ್ ಚಿತ್ರಗಳ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಆದರೆ ಎರಡನೇ ಬಾರಿ ನೀಡಿದ ಗ್ರ್ಯಾಂಡ್ ಎಂಟ್ರಿ ಇದೆಯಲ್ಲ? ಅದೇ ಶ್ರೀಮಂಜುನಾಥ. ಚಿತ್ರದಲ್ಲಿ ಕೂಡ ಅವರು ಮಂಜುನಾಥನ ಭಕ್ತನಾಗಿ ಭಾವನಾತ್ಮಕವಾಗಿ ವರ್ತಿಸುವ ಸನ್ನಿವೇಶಗಳೇ ಪ್ರೇಕ್ಷಕರು ಮೆಚ್ಚಿದ ದೃಶ್ಯಗಳಾಗಿದ್ದವು. ಇದೀಗ ಅವರ ಸೆಂಟಿಮೆಂಟ್ ಸಾಮರ್ಥ್ಯದ ಸಾಕಾರಕ್ಕೆ ಮತ್ತೊಂದು ಗರಿ ಎನ್ನುವಂತೆ ಕುರುಕ್ಷೇತ್ರದ ನಟನೆಯೂ ಕೂಡ ಸೇರಿಕೊಂಡಿದೆ.

ಕರ್ಣನಾಗಿ ಕಣ್ತುಂಬುವಂತೆ ಮಾಡುವ ಅರ್ಜುನ್
ಹೆಸರು ಅರ್ಜುನ್ ಎಂದು ಇದ್ದರೂ, ಕುರುಕ್ಷೇತ್ರದಲ್ಲಿ ಅರ್ಜುನ್ ಸರ್ಜಾ ನಿರ್ವಹಿಸಿರುವ ಪಾತ್ರ ಕರ್ಣನದ್ದು. ಹಾಗೆ ನೋಡಿದರೆ ಅರ್ಜುನ್ ಸರ್ಜಾ ಅವರ ಮೂಲ ಹೆಸರು ಶ್ರೀನಿವಾಸ ಎಂದು! ಕನ್ನಡದ ಖ್ಯಾತ ಖಳನಟ ಶಕ್ತಿ ಪ್ರಸಾದ್ ಅವರ ಪುತ್ರನಾಗಿರುವ ಇವರು ಹೆಸರು ಮಾಡಿದ್ದು ಮಾತ್ರ ನಾಯಕರಾಗಿ. ಕುರುಕ್ಷೇತ್ರ ಚಿತ್ರದಲ್ಲಿ ದುರ್ಯೋಧನನಿಗೆ ಸ್ನೇಹಿತನಾಗಿ, ಮಾತಿಗೆ ತಪ್ಪದ ನಂಬಿಕಸ್ಥನಾಗಿ ಮತ್ತು ತಾಯಿಗೆ ಕೂಡ ಋಣ ಸಂದಾಯ ಮಾಡುವ ಮಹಾಪುತ್ರ ಕರ್ಣನಾಗಿ ಮನಸೆಳೆಯುತ್ತಾರೆ ಅರ್ಜುನ್. ಅವರ ಮತ್ತು ಭಾರತೀ ವಿಷ್ಣುವರ್ಧನ್ ಅವರ ಕರ್ಣ ಕುಂತಿ ಸನ್ನಿವೇಶ ಪ್ರೇಕ್ಷಕರು ಕಣ್ತುಂಬಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. 

ನಿರ್ದೇಶಕರಾಗಿಯೂ ಸೈ!
ಚೆಲುವು, ಕಂಠ, ಹೊಡೆದಾಟದ ರಂಗ, ನೃತ್ಯ ಹೀಗೆ ಯಾವ ವಿಭಾಗದಲ್ಲಿ ನೋಡಿದರೂ ಪರಿಪೂರ್ಣ ನಾಯಕನಾಗಿ ಗುರುತಿಸುವಂಥ ಅರ್ಜುನ್ ಅವರು ನಿರ್ದೇಶಕರಾಗಿಯೂ ಹೆಸರು ಮಾಡಿದ್ದಾರೆ. ಸಾಮಾನ್ಯವಾಗಿ ತಾರೆಯರು ನಿರ್ದೇಶನಕ್ಕೆ ಇಳಿದರೆ ಅದು ಯಾರದೋ ಬಸಿರಿಗೆ ತಾವು ಹೆಸರು ಮಾಡಿಕೊಂಡ ಹಾಗೆ ಇರುತ್ತದೆ. ಆದರೆ ಮೂರು ದಶಕಕ್ಕೂ ಹೆಚ್ಚಿನ ವರ್ಷಗಳ ಸಿನಿಮಾನುಭವವನ್ನು ನಿರ್ದೇಶನದ ಮೂಲಕ ಸಾಕ್ಷಾತ್ಕರಿಸಿಕೊಂಡ ಕೀರ್ತಿ ಅರ್ಜುನ್ ಸರ್ಜರದ್ದು. ಚಿತ್ರರಂಗ ಪ್ರವೇಶಿಸಿ ದಶಕದೊಳಗೆ ತಮಿಳು ಚಿತ್ರವನ್ನು ನಿರ್ದೇಶಿಸಲು ಆರಂಭಿಸಿದ ಅವರು, ಕನ್ನಡದಲ್ಲಿ ಮೊದಮೊದಲು ನಿರ್ಮಾಪಕರಾಗಿ ಗುರುತಿಸಿಕೊಂಡರು. ರಮೇಶ್ ಅರವಿಂದ್ ಅಭಿನಯದ ಸುಪರ್ ಹಿಟ್ ಚಿತ್ರ 'ತುತ್ತಾ ಮುತ್ತಾ' ಇವರದೇ ನಿರ್ಮಾಣದ ಸಿನಿಮಾ ಆಗಿತ್ತು. ನಿರ್ದೇಶನದ ವಿಚಾರಕ್ಕೆ ಬಂದರೆ ನಾಲ್ಕು ವರ್ಷಗಳ ಹಿಂದೆ ಅಭಿಮನ್ಯು ಎನ್ನುವ ಚಿತ್ರ ಮತ್ತು ಮಗಳನ್ನು ನಾಯಕಿಯಾಗಿ ತೆರೆಗೆ ತಂದಂಥ ಪ್ರೇಮ ಬರಹ ಕನ್ನಡದ ಉದಾಹರಣೆಗಳು.

ಅರ್ಜುನ್ ಸರ್ಜ ಇಂದು ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದರೂ, ಚೆನ್ನೈನಲ್ಲಿ ನೆಲೆಸಿದ್ದರೂ ಕನ್ನಡವನ್ನು ಮರೆತಿಲ್ಲ. ಅದಕ್ಕೊಂದು ಉತ್ತಮ ಉದಾಹರಣೆ ಅವರ ಮೊಬೈಲ್ ಕಾಲರ್ ಟೋನ್. ನಾವು ಕರೆ ಮಾಡುತ್ತಿದ್ದ ಹಾಗೆಯೇ ಆ ಕಡೆಯಿಂದ “ಪ್ರೇಮ ಬರಹ.. ಕೋಟಿ ತರಹ’’ ಎನ್ನುವ ಹಂಸಲೇಖರ ಸಂಗೀತ, ಸಾಹಿತ್ಯದ ಗೀತೆ ಕೇಳಿ ಬರುತ್ತದೆ. ಅವರಿಗೆ ಜನ್ಮದಿನದ ಶುಭಾಶಯಗಳು

share
ಶಶಿಕರ ಪಾತೂರು
ಶಶಿಕರ ಪಾತೂರು
Next Story
X