ಉಡುಪಿ: ಆ.17ರಂದು ಮುಸ್ಲಿಮ್ ಜಮಾಅತ್ ಜಿಲ್ಲಾ ಘಟಕ ಉದ್ಘಾಟನೆ
ಉಡುಪಿ, ಆ.16: ಕರ್ನಾಟಕ ಮುಸ್ಲಿಮ್ ಜಮಾಅತ್ ಉಡುಪಿ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭವು ಆ.17ರಂದು ಬೆಳಗ್ಗೆ 10ಗಂಟೆಗೆ ಕಟಪಾಡಿಯ ಮಸೀದಿ ಹಾಲ್ನಲ್ಲಿ ನಡೆಯಲಿದೆ.
ಘಟಕವನ್ನು ಮುಸ್ಲಿಮ್ ಜಮಾಅತ್ ರಾಜ್ಯ ನಿರ್ದೇಶಕ ಮಂಡಳಿಯ ಜನರಲ್ ಕನ್ವೀನರ್ ಖಾಝಿ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ ಉದ್ಘಾಟಿಸಲಿರುವರು. ಜಿಲ್ಲಾ ಎಸ್ವೈಎಸ್ ಅಧ್ಯಕ್ಷ ಅಸ್ಸಯ್ಯಿದ್ ಜಅಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ದುಆ ನೆರವೇರಿಸಲಿರುವರು.
ಅಧ್ಯಕ್ಷತೆಯನ್ನು ರಾಜ್ಯ ಮುಸ್ಲಿಮ್ ಜಮಾಅತ್ ಉಪಾಧ್ಯಕ್ಷ ಮೌಲಾನಾ ಡಾ.ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ವಹಿಸಲಿರುವರು. ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಾಪಿ ಸಅದಿ, ಉಪಾಧ್ಯಕ್ಷ ಅಬೂ ಸುಫ್ಯಾನ್ ಇಬ್ರಾಹಿಂ ಮದನಿ ಭಾಗವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.
Next Story