ಡಿ. 8ರಂದು ಸಿಬಿಎಸ್ಇ ಸಿಟಿಇಟಿ ಪರೀಕ್ಷೆ
ಹೊಸದಿಲ್ಲಿ, ಆ. 16: ಸಿಬಿಎಸ್ಇ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ (ಸಿಟಿಇಟಿ)ಯ 13ನೇ ಆವೃತ್ತಿಯನ್ನು ಡಿಸೆಂಬರ್ 8ರಂದು ನಡೆಸಲಿದೆ ಎಂದು ಸಿಬಿಎಸ್ಇ ತಿಳಿಸಿದೆ. ದೇಶಾದ್ಯಂತದ 110 ನಗರಗಳಲ್ಲಿ 20 ಭಾಷೆಗಳಲ್ಲಿ ಈ ಪರೀಕ್ಷೆ ನಡೆಯಲಿದೆ.
ಪರೀಕ್ಷೆ, ಪಠ್ಯಕ್ರಮ, ಭಾಷೆ, ಅರ್ಹತೆ, ಮಾನದಂಡ, ಪರೀಕ್ಷೆ ಶುಲ್ಕ, ಪರೀಕ್ಷೆ ನಡೆಯುವ ನಗರ ಹಾಗೂ ಪ್ರಮುಖ ದಿನಾಂಕಗಳನ್ನು ಒಳಗೊಂಡ ಮಾಹಿತಿ ಬುಲೆಟಿನ್ ಸಿಟಿಇಟಿಯ ಅಧಿಕೃತ ವೆಬ್ಸೈಟ್ (www.ctet.nic.in ) ನಲ್ಲಿ ಆಗಸ್ಟ್ 19ರಿಂದ ಲಭ್ಯವಿದೆ.
ಆಸಕ್ತ ಅಭ್ಯರ್ಥಿಗಳು ಆನ್ಲೈನ್ನಲ್ಲಿ ಆಗಸ್ಟ್ 19ರಿಂದ ಅರ್ಜಿ ಸಲ್ಲಿಸಬಹುದು. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟಂಬರ್ 18. ಪರೀಕ್ಷಾ ಶುಲ್ಕವನ್ನು ಸೆಪ್ಟಂಬರ್ 23 ಅಪರಾಹ್ನ 3.30ರ ವರೆಗೆ ಪಾವತಿಸಬಹುದು ಎಂದು ಸಿಬಿಎಸ್ಇ ಹೇಳಿದೆ.
Next Story