ಗಾಝಾ ಪಟ್ಟಿ ಮೇಲೆ ಇಸ್ರೇಲ್ ವಿಮಾನಗಳ ದಾಳಿ
ಗಾಝಾ ನಗರ (ಫೆಲೆಸ್ತೀನ್), ಆ. 17: ಇಸ್ರೇಲಿ ಯುದ್ಧ ವಿಮಾನಗಳು ಶನಿವಾರ ಮುಂಜಾನೆ ಗಾಝಾ ಪಟ್ಟಿಯಲ್ಲಿ ಮೂರು ಸ್ಥಳಗಳ ಮೇಲೆ ದಾಳಿ ನಡೆಸಿದವು, ಆದರೆ, ಯಾವುದೇ ಸಾವು-ನೋವು ಸಂಭವಿಸಿರುವುದು ವರದಿಯಾಗಿಲ್ಲ ಎಂದು ಫೆಲೆಸ್ತೀನಿಯನ್ ಭದ್ರತಾ ಮೂಲವೊಂದು ಹೇಳಿದೆ.
ಫೆಲೆಸ್ತೀನಿಯರು ಗಾಝಾ ಪಟ್ಟಿಯಿಂದ ದಕ್ಷಿಣ ಇಸ್ರೇಲ್ಗೆ ಶುಕ್ರವಾರ ರಾಕೆಟೊಂದನ್ನು ಹಾರಿಸಿದ ಬಳಿಕ ಇಸ್ರೇಲ್ ಈ ದಾಳಿಗಳನ್ನು ನಡೆಸಿದೆ.
ಇಸ್ರೇಲಿ ಯುದ್ಧ ವಿಮಾನಗಳು ಬೈತ್ ಹನೂನ್ನಲ್ಲಿರುವ ಹಮಾಸ್ ವೀಕ್ಷಣಾ ಕೇಂದ್ರ, ಗಾಝಾ ನಗರದ ಸಮೀಪದ ಒಂದು ಕಟ್ಟಡ ಹಾಗೂ ಗಾಝಾ ಪಟ್ಟಿಯ ಮಧ್ಯದಲ್ಲಿರುವ ಡೇರ್ ಅಲ್ ಬಲಾ ಸಮೀಪದ ಮೈದಾನಗಳನ್ನು ಗುರಿಯಾಗಿಸಿ ದಾಳಿ ನಡೆಸಿದವು.
Next Story