ಉದ್ಯೋಗ ಕುಸಿತದ ಬಗ್ಗೆ ಕೇಂದ್ರದ ಮೌನ ಅಪಾಯಕಾರಿ: ಪ್ರಿಯಾಂಕಾ ಗಾಂಧಿ

ಹೊಸದಿಲ್ಲಿ, ಆ. 19: ಆರ್ಥಿಕ ಕುಸಿತದ ಬಗ್ಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ಸೋಮವಾರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಈ ವಿಷಯದ ಬಗ್ಗೆ ಕೇಂದ್ರದ ಮೌನ ಅಪಾಯಕಾರಿ ಎಂದಿದ್ದಾರೆ.
ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಲು ಅವರು ಆರ್ಥಿಕ ಕುಸಿತ ಹಾಗೂ ಉದ್ಯೋಗದ ಇಳಿಕೆಯ ಕುರಿತ ಮಾದ್ಯಮ ವರದಿ ಉಲ್ಲೇಖಿಸಿದ್ದಾರೆ. ‘‘ಸರಕಾರದ ಸಂಪೂರ್ಣ ವೌನ ಅಪಾಯಕಾರಿ. ಕಂಪೆನಿಗಳು ಕಾರ್ಯಾಚರಿ ಸುತ್ತಿಲ್ಲ. ಇದರಿಂದ ಜನರನ್ನು ಉದ್ಯೋಗದಿಂದ ತೆಗೆಯಲಾಗುತ್ತಿದೆ. ಆದರೆ, ಬಿಜೆಪಿ ಸರಕಾರ ವೌನಕ್ಕೆ ಶರಣಾಗಿದೆ’’ ಎಂದು ಪ್ರಿಯಾಂಕಾ ಹಿಂದಿ ಟ್ವೀಟ್‌ನಲ್ಲಿ ಹೇಳಿದ್ದಾರೆ. ದೇಶದ ಈ ಪ್ರಮುಖ ಆರ್ಥಿಕ ಕುಸಿತಕ್ಕೆ ಯಾರು ಹೊಣೆ ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ. ಕಳೆದ ಸುಮಾರು 19 ವರ್ಷಗಳಲ್ಲಿ ಆಟೋಮೊಬೈಲ್ ಕ್ಷೇತ್ರ ಅತಿಯಾಗಿ ಕುಸಿತಕ್ಕೆ ಒಳಗಾದ ಈ ಸಂದರ್ಭ ಪ್ರಿಯಾಂಕಾ ಅವರ ಹೇಳಿಕೆ ಹೊರಬಿದ್ದಿದೆ.
Next Story





