Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಚರಿತ್ರೆಯ ಬೆಳಕಿನಲ್ಲಿ ರಾಮಕೃಷ್ಣರ...

ಚರಿತ್ರೆಯ ಬೆಳಕಿನಲ್ಲಿ ರಾಮಕೃಷ್ಣರ ವರ್ತಮಾನ....

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ23 Aug 2019 12:03 AM IST
share
ಚರಿತ್ರೆಯ ಬೆಳಕಿನಲ್ಲಿ ರಾಮಕೃಷ್ಣರ ವರ್ತಮಾನ....

 ಮನುಸ್ಮತಿ, ಭಗವದ್ಗೀತೆ, ರಾಷ್ಟ್ರೀಯತೆ, ಸಂಸ್ಕೃತಿ....ಮುಂತಾದ ವಿಷಯಗಳು ಇವತ್ತಿನ ಬಹು ಚರ್ಚಿತ ವಿಷಯಗಳು. ಇವುಗಳ ಬಗ್ಗೆ ಅತ್ಯಂತ ತೀಕ್ಷ್ಣವಾಗಿ ಪರ-ವಿರೋಧಗಳು, ತಪ್ಪು ವ್ಯಾಖ್ಯಾನಗಳು ಹಾಗೂ ವೈಭವೀಕರಣ ಪ್ರವೃತ್ತಿಗಳು ಹೊರ ಬರುತ್ತಿವೆ. ನಾಡಿನ ಕೆಲವೇ ಕೆಲವು ವಿದ್ವಾಂಸರು ಈ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿ ವಿಚಾರ ಮಂಡಿಸುತ್ತಿದ್ದಾರೆ. ಅಂತಹ ಹಿರಿಯ ವಿಚಾರವಾದಿ ವಿದ್ವಾಂಸರಲ್ಲಿ ಜಿ. ರಾಮಕೃಷ್ಣರು ಒಬ್ಬರು. ಅವರು ಬರೆದಿರುವ ‘ವರ್ತಮಾನ’ ಪುಟ್ಟ ಕೃತಿ ಅಂತಹ ಮಂಡನೆಗಳ ಸಾಲಿಗೆ ಸೇರುತ್ತದೆ. ಚರಿತ್ರೆಯ ಬೆಳಕಿನಲ್ಲಿ ಅವರು ವರ್ತಮಾನದ ಹೆಜ್ಜೆಗಳನ್ನು ಗುರುತಿಸುವ ಪ್ರಯತ್ನವನ್ನು ಮಾಡಿದ್ದಾರೆ. ಕೃತಿಯಲ್ಲಿ ಎರಡು ಅಧ್ಯಾಯಗಳು ರಾಷ್ಟ್ರೀಯತೆಯ ವ್ಯಾಖ್ಯಾನಗಳಿಗೆ ಸೀಮಿತವಾಗಿವೆ. ಹಾಗೆಯೇ ಕೌಟಿಲ್ಯನ ಅರ್ಥಶಾಸ್ತ್ರದ ಕುರಿತಂತೆ ಒಂದು ಟಿಪ್ಪಣಿಯಿದೆ. ಜತೆಗೆ ಆರು ಅಧ್ಯಾಯಗಳಲ್ಲಿ ಮನುಸ್ಮತಿಯ ವಿಸ್ತೃತ ಪರಿಚಯವನ್ನು ಮಾಡುತ್ತಾರೆ.

‘‘....ಯಾವ ಸಮಾಜವೂ ಸ್ಥಗಿತವಲ್ಲ. ನಮ್ಮ ದೇಶದ ಸಮಾಜದ ಇತಿಹಾಸವು ಅದಕ್ಕೊಂದು ದೃಷ್ಟಾಂತ. ಸಿಂಧೂ ಕಣಿವೆಯ ನಾಗರಿಕತೆ, ಋಗ್ವೇದ ಕಾಲೀನ ವೈಭವ, ಆನಂತರದಲ್ಲಿ ಉಗಮಗೊಂಡ ವಿಭಜಿತ ಸಮಾಜ, ಆಮೇಲಿನ ಸಾಮಾಜಿಕ ತುಮುಲಗಳು, ಎಲ್ಲಾ ಎಷ್ಟು ಭಿನ್ನವಾಗಿವೆ ಎಂಬುದು ಚಿರಪರಿಚಿತ. ಸಮಾನತೆಯಿಂದ ಅಸಮಾನತೆಯೆಡೆಗೆ ವಿಕಸಿಸಿದ ನಮ್ಮ ಸಮಾಜದಲ್ಲಿ ನಾವಿಂದು ಪ್ರತ್ಯಕ್ಷವಾಗಿ ಕಾಣುವ ಲಕ್ಷಣಗಳು ಎಷ್ಟೇ ವಿಧಗಳಲ್ಲಿ ಪ್ರತಿಫಲನಗೊಂಡಿವೆ. ಎಲ್ಲವೂ ರಮ್ಯವಾಗಿರಲಿಲ್ಲ. ಅಸಹ್ಯವೂ ಆಗಿರಲಿಲ್ಲ. ನಿಜಕ್ಕೂ ನಮ್ಮ ಪ್ರಾಚೀನ ಸಮಾಜ ಏನಾಗಿದ್ದಿತೆಂಬ ಕುತೂಹಲವನ್ನು ವಸ್ತುನಿಷ್ಠವಾಗಿ ತಣಿಸುವ ಬದಲು ಸಬೂಬುಗಳನ್ನು ಕಂಡುಕೊಳ್ಳುವುದು ಇಲ್ಲವೇ ರಮ್ಯತೆಯನ್ನು ಆರೋಪಿಸುವುದು ಉಪಹಾಸಕ್ಕೆ ಕಾರಣವಾಗಿದೆ. ಅದರ ಜಾಗದಲ್ಲಿ ನೈಜ ಇತಿಹಾಸವನ್ನು ನಾವು ಗುರುತಿಸಿ ಮುಂದುವರಿಯಬೇಕು. ಎಲ್ಲವೂ ಶ್ರೇಷ್ಠವಾಗಿದ್ದಿದ್ದರೆ ಪತನವೇಕಾಗಬೇಕಾಗಿತ್ತು? ಸಂಘರ್ಷವೇಕೆ ಬೇಕಾಗುತ್ತಿತ್ತು? ನಾಗರಿಕತೆಯಲ್ಲಿ ನಾವೆಷ್ಟು ದೂರ ನಡೆದು ಬಿಟ್ಟಿದ್ದೇವೆಂದರೆ ಎಲ್ಲವೂ ಹಿಂದಿನಂತಿರಬೇಕು ಎಂದು ಆಗ್ರಹಿಸುವವರು ಸಹ ಅದನ್ನು ಗಂಭೀರವಾಗಿ ಪರಿಗಣಿಸಲಾರರು. ಇಂದಿನ ವೌಲ್ಯಗಳನ್ನು ನಿರ್ದಿಷ್ಟವಾಗಿ ಗುರುತಿಸಿ ಅವುಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸುವ ಹಂತದಲ್ಲಿ, ವೌಲ್ಯಗಳು ಕ್ರಮಿಸಿದ ಹಾದಿಯನ್ನು ತಿಳಿಯುವುದು ಅಗತ್ಯ. ಅದಕ್ಕೆ ಕಲ್ಪನಾಲೋಕದ ವಿಹಾರ ಬೇಡ, ಇತಿಹಾಸದ ದಾಖಲೆಗಳು ಬೇಕು...’’ ಎಂದು ರಾಮಕೃಷ್ಣ ಅವರು ಅಭಿಪ್ರಾಯ ಪಡುತ್ತಾರೆ. ಮತ್ತು ಅದರ ಫಲವೇ ಈ ಅಧ್ಯಯನ ಕೃತಿ.

ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 104. ಮುಖಬೆಲೆ 100 ರೂ.

share
-ಕಾರುಣ್ಯಾ
-ಕಾರುಣ್ಯಾ
Next Story
X