ಪತಿ ತನ್ನೊಂದಿಗೆ ಜಗಳವಾಡುತ್ತಿಲ್ಲ, ಅತಿಯಾಗಿ ಪ್ರೀತಿಸುತ್ತಾರೆ ಎಂದು ವಿಚ್ಛೇದನ ಕೋರಿದ ಮಹಿಳೆ
ದುಬೈ: ಪತಿ ಈಕೆಯನ್ನು ಅತಿಯಾಗಿ ಪ್ರೀತಿಸುತ್ತಾರೆ; ಅಡುಗೆ ಮಾಡುತ್ತಾರೆ, ಮನೆ ಸ್ವಚ್ಛಗೊಳಿಸುತ್ತಾರೆ, ಗುಡಿಸುತ್ತಾರೆ ಹಾಗೂ ಇತರ ಎಲ್ಲ ಕೆಲಸವನ್ನೂ ಮಾಡುತ್ತಾರೆ. ಆದರೆ ಈ ಪ್ರೀತಿಯ ಪರಾಕಾಷ್ಠತೆಯೇ ಇದೀಗ ಪತಿಗೆ ಮುಳುವಾಗಿದೆ. ಗಂಡ ತನ್ನೊಂದಿಗೆ ವಾಗ್ವಾದ ಮಾಡುವುದಿಲ್ಲ; ಜಗಳವಾಡುವುದಿಲ್ಲ. ಆದ್ದರಿಂದ ವಿಚ್ಛೇದನ ನೀಡಬೇಕು ಎಂದು ಕೋರಿ ಮಹಿಳೆಯೊಬ್ಬರು ಅರ್ಜಿ ಸಲ್ಲಿಸಿದ ವಿಚಿತ್ರ ಪ್ರಸಂಗ ವರದಿಯಾಗಿದೆ.
ಫುಜಾರಯಾ ಕೋರ್ಟ್ನಲ್ಲಿ ಮಹಿಳೆ ಈ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ಅತೀವ ಪ್ರೀತಿ ಹಾಗೂ ಕಕ್ಕುಲತೆಯಿಂದ ನನಗೆ ಉಸಿರುಗಟ್ಟಿದೆ. ಅವರು ನನಗೆ ಮನೆ ಕೆಲಸ ಮಾಡಲೂ ಸಹಾಯ ಮಾಡುತ್ತಾರೆ. ಕೆಲವೊಮ್ಮೆ ಅಡುಗೆಯೂ ಮಾಡುತ್ತಾರೆ. ಸುಧೀರ್ಘ ವೈವಾಹಿಕ ಜೀವನದಲ್ಲಿ ಒಮ್ಮೆಯೂ ಜಗಳ ಮಾಡಿಲ್ಲ ಎನ್ನುವುದು ಅಕೆಯ ಆಕ್ಷೇಪ. ಪತಿ ಅಷ್ಟರಮಟ್ಟಿಗೆ ಕರುಣೆ ತೋರುತ್ತಿರುವುದರಿಂದ ಬಾಳು ನರಕವಾಗಿದೆ ಎಂದು ಆಪಾದಿಸಿದ್ದಾಳೆ.
Next Story