ಸೊಪ್ಪು ಕೀಳಲು ಹೋದ ಹಾಸ್ಟೆಲ್ ಸೆಕ್ಯುರಿಟಿ ವಿದ್ಯುತ್ ಸ್ಪರ್ಶಿಸಿ ಮೃತ್ಯು

ಮಂಡ್ಯ,ಆ.23: ಸೊಪ್ಪು ಕೀಳಲು ಹೋದ ಹಾಸ್ಟೆಲ್ ಭದ್ರತಾ ಸಿಬ್ಬಂದಿಯೋರ್ವರು ವಿದ್ಯುತ್ ತಗುಲಿ ಸಾವನ್ನಪ್ಪಿರುವ ಘಟನೆ ನಗರದ ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್ ನಲ್ಲಿ ನಡೆದಿದೆ.
ಹೊರಗುತ್ತಿಗೆ ಭದ್ರತಾ ಸಿಬ್ಬಂದಿ ಕನಗನಮರಡಿಯ ಭದ್ರತಾ ಸಿಬ್ಬಂದಿ ಸುರೇಶ್ (50) ಹಾಸ್ಟೆಲ್ ನಲ್ಲಿ ಅಡಿಗೆಗಾಗಿ ಹಾಸ್ಟೆಲ್ ಆವರಣದಲ್ಲಿದ್ದ ನುಗ್ಗೇಮರದಲ್ಲಿ ಸೊಪ್ಪು ಕೀಳಲು ಕಬ್ಬಿಣದ ಏಣಿ ಬಳಸಿದ್ದಾರೆ. ಈ ವೇಳೆ ಸನಿಹದಲ್ಲೇ ಇದ್ದ ವಿದ್ಯುತ್ ತಂತಿಗೆ ಏಣಿ ತಗುಲಿ ಸುರೇಶ್ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.
ಬಿಎಸ್ಪಿ ಮುಖಂಡ ಎಂ.ಕೃಷ್ಣಮೂರ್ತಿ ಹಾಗೂ ಸಮಾಜ ಕಲ್ಯಾಣ ಅಧಿಕಾರಿ ಸ್ಥಳಕ್ಕೆ ಆಗಮಿಸಿ ಪರೀಶಿಲನೆ ನಡೆಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಿಮ್ಸ್ ಗೆ ಕೊಂಡೊಯ್ಯಲಾಗಿದೆ
Next Story





