ಅಬುದಾಭಿಯಲ್ಲಿ ಗಾಂಧೀಜಿ ಅಂಚೆಚೀಟಿ ಬಿಡುಗಡೆ
ಅಬುದಾಭಿ,ಆ.24: ಮಹಾತ್ಮಗಾಂಧೀಜಿಯವರ 150ನೇ ಜನ್ಮದಿನಾಚರಣೆಯ ಸ್ಮರಣಾರ್ಥವಾಗಿ ಯುಎಇ ಹೊರತಂದಿರುವ ಅಂಚೆಚೀಟಿಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಇಲ್ಲಿ ನಡೆ ಕಾರ್ಯಕ್ರಮವೊಂದರಲ್ಲಿ ಬಿಡುಗಡೆಗೊಳಿಸಿದ್ದಾರೆ.
ಅಬುದಾಭಿಯ ಯುವರಾಜ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಉಪಸ್ಥಿತರಿದ್ದರು. ಯುಎಇ ಅಧ್ಯಕ್ಷರ ಅರಮನೆಯು ಈ ಅಂಚೆ ಚೀಟೆಗಳನ್ನು ಬಿಡುಗಡೆಗೊಳಿಸಿತ್ತು. ಯುಎಇ 2019ನೇ ಇಸವಿಯನ್ನು ಸಹಿಷ್ಣುತೆಯ ವರ್ಷವಾಗಿ ಆಚರಿಸುತ್ತಿರುವ ಸಂದರ್ಭದಲ್ಲಿ ಗಾಂಧೀಜಿಯವರ ಅಂಚೆಚೀಟಿಯನ್ನು ಹೊರತಂದಿರುವುದು ವಿಶೇಷವಾದ ಮಹತ್ವವನ್ನು ಪಡೆದಿದೆಯೆಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.
Next Story