ಯೋಧನ ಹೆಸರಿನಲ್ಲಿ ವಂಚನೆ: ದೂರು ದಾಖಲು
ಬೆಂಗಳೂರು, ಆ.25: ಯೋಧನ ಹೆಸರಿನಲ್ಲಿ ವಂಚನೆ ಮಾಡಿರುವ ಆರೋಪದಡಿ ಇಲ್ಲಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಾಹಿಲ್ ಕುಮಾರ್ ಎಂಬಾತ ಫೇಸ್ಬುಕ್ ಖಾತೆಯಲ್ಲಿ ತನ್ನ ಬೈಕ್ ಮಾರಾಟಕ್ಕಿದೆ ಎಂದು ಜಾಹೀರಾತು ಹಾಕಿದ್ದ. ಅದರಲ್ಲಿ ತಾನು ಜಮ್ಮು ಕಾಶ್ಮೀರ ಪುಲ್ವಾಮಾದಲ್ಲಿ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ, ತನಗೆ ಈ ಬೈಕ್ ಅವಶ್ಯಕತೆ ಇಲ್ಲ. ಹಾಗಾಗಿ, ಮಾರಾಟ ಮಾಡುತ್ತಿದ್ದು, ಹಣ ಬೇಕಾಗಿದೆ ಎಂದು ಉಲ್ಲೇಖಿಸಿದ್ದ ಎನ್ನಲಾಗಿದೆ.
ಇದನ್ನು ಗಮನಿಸಿದ ಮಂಜು ಎಂಬುವರು, ಸಾಹಿಲ್ಕುಮಾರ್ ಜೊತೆ ಮಾತುಕತೆ ನಡೆಸಿ 1 ಲಕ್ಷ ರೂ.ಹಣ ವರ್ಗಾವಣೆ ಮಾಡಿದ್ದಾರೆ. ಆದರೆ, ಆತ ಬೈಕ್ ನೀಡದೆ, ವಂಚನೆ ಮಾಡಿದ್ದು, ಈ ಸಂಬಂಧ ದೂರು ನೀಡಿ, ತನಿಖೆಗೆ ಆಗ್ರಹಿಸಿದ್ದಾರೆ.
Next Story