ವಂಚಕ ಸ್ಯಾಮ್ ಪೀಟರ್ ಪ್ರಕರಣ: ಮತ್ತಿಬ್ಬರು ಆರೋಪಿಗಳು ಸೆರೆ

ಮಂಗಳೂರು, ಆ.26: ಕೇಂದ್ರ ಸರಕಾರದ ತನಿಖಾ ಸಂಸ್ಥೆ ಹೆಸರಲ್ಲಿ ದರೋಡೆ ಸಂಚು ರೂಪಿಸಿದ ಪ್ರಕರಣದ ಪ್ರಮುಖ ಆರೋಪಿ ಸ್ಯಾಮ್ ಪೀಟರ್ ಜತೆ ವ್ಯವಹರಿಸುತ್ತಿದ್ದ ಮತ್ತಿಬ್ಬರು ಆರೋಪಿಗಳನ್ನು ಮಂಗಳೂರು ಕದ್ರಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ನಾಗರಬಾವಿ ನಿವಾಸಿಗಳಾದ ನಾಗರಾಜ ಎನ್.ಎಸ್. (39), ರಾಘವೇಂದ್ರ (31) ಬಂಧಿತ ಆರೋಪಿಗಳು.
ಆರೋಪಿತರಿಂದ ಎನ್‌ಸಿಐಬಿ ಬಾವುಟ, ಬೋರ್ಡ್, ಎಂಎಲ್‌ಸಿ ಪಾಸ್ ಇರುವ ಕಾರು, ಐಡಿ ಕಾರ್ಡ್‌ಗಳನ್ನು ಮತ್ತು ಪ್ರಕರಣಕ್ಕೆ ಸಂಬಂಧಿಸಿ ದಂತೆ ಪ್ರಮುಖ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಎಂಎಲ್‌ಸಿ ಸಿ.ಆರ್.ಮನೋಹರ್ ಅವರ ವಿಧಾನಸೌಧ ವಾಹನ ಪಾಸ್‌ನ್ನು ಕೂಡ ಆರೋಪಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದರು. ಈ ಬಗ್ಗೆಯೂ ತನಿಖೆ ನಡೆಯುತ್ತಿದೆ. ರಾಘವೇಂದ್ರ ಸ್ವಾಮೀಜಿ, ಕಾಶಿಮಠ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆಯ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ‘ಸಿಐಡಿ’ ತನಿಖಾಧಿಕಾರಿಗಳು ಮಂಗಳೂರಿಗೆ ಆಗಮಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story









