ಮಟಪಾಡಿ: 200 ಗಿಡ ನೆಟ್ಟು ವನಮಹೋತ್ಸವ ಆಚರಣೆ

ಉಡುಪಿ, ಆ.26: ಡಿಸೆಂಟ್ ಫ್ರೆಂಡ್ಸ್ ಮಟಪಾಡಿ ನೀಲಾವರ ಇವರ ವತಿ ಯಿಂದ 20ನೇ ವಾರ್ಷಿಕೋತ್ಸವದ ಪ್ರಯುಕ್ತ ವನಮಹೋತ್ಸವ ಕಾರ್ಯಕ್ರಮ ವನ್ನು ರವಿವಾರ ಆಯೋಜಿಸಲಾಗಿತ್ತು.
ಸಂಘಟನೆಯ ಪ್ರಮುಖ ರಾಹುಲ್ ನೇತೃತ್ವದಲ್ಲಿ ಸದಸ್ಯರು ಮಟಪಾಡಿ ಯಿಂದ ಕೆಮ್ಮಣ್ ಕಡುವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ಸುಮಾರು 200 ವಿವಿಧ ಜಾತಿಯ ಗಿಡಗಳನ್ನು ನೆಟ್ಟರು. ಪ್ರಕೃತಿ ಸೌಂದರ್ಯದ ಮುಂದೆ ಬೇರೆ ಸೌಂದರ್ಯ ನಗಣ್ಯ. ಹಸಿರನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಂಘಟನೆ ಸದಾ ಬದ್ದವಾಗಿದೆ ಎಂದು ರಾಹುಲ್ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರದೀಪ್, ಸಂದೇಶ್, ಯೋಗೀಶ್, ಸುನೀಲ್, ಪ್ರಶಾಂತ್, ಕೋಟಿ ಪೂಜಾರಿ, ಚಿನ್ಮಯ್, ರಂಜನ್, ರಾಘವೇಂದ್ರ, ಸ್ಟೀವನ್, ಸಚಿನ್, ಪ್ರವೀಣ್, ಪ್ರಜ್ವಲ್, ಧೀರಜ್, ಸೂರ್ಯ, ಗಣೇಶ್ ಸುರೇಶ್, ಸತೀಶ್ ಮೊದಲಾದವರು ಉಪಸ್ಥಿತರಿದ್ದರು.
Next Story





