ಬ್ರಹ್ಮಾವರ: ಗಾಂಧಿ ತತ್ವಗಳ ವಿಚಾರ ಸಂಕಿರಣ

ಉಡುಪಿ, ಆ.26: ಗಾಂಧಿಯು ಮಹಾತ್ಮನೆನಿಸಿಕೊಂಡು ಜಗತ್ತಿಗೇ ಮಾನ್ಯ ರೆನಿಸಿದರು. ಅವರು ಅಳವಡಿಸಿಕೊಂಡ ತತ್ವಗಳು ಅವರನ್ನು ಅಷ್ಟು ಎತ್ತರಕ್ಕೇರಿ ಸಿತ್ತು.ಇಂದಿಗೂ ಗಾಂಧೀಜಿ ಹಲವಾರು ವಿಚಾರಗಳಲ್ಲಿ ಪ್ರಸ್ತುತವೆನಿಸಿಕೊಳ್ಳುತ್ತಾರೆ ಎಂದು ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲ ಕೆ.ಶೆಟ್ಟಿ ಹೇಳಿದ್ದಾರೆ.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಸರಕಾರಿ ಪದವಿ ಪೂರ್ವ ಕಾಲೇಜು ಬ್ರಹ್ಮಾವರ ಇವುಗಳ ಸಹಯೋಗದೊಂದಿಗೆ ಬ್ರಹ್ಮಾವರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಮಹಾತ್ಮ ಗಾಂಧಿಯ 150ನೇ ಜನ್ಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾದ ಒಂದು ದಿನದ ವಿಚಾರಸಂಕಿರಣ ಮತ್ತು ಕಾರ್ಯಾಗಾರವನ್ನು ಉ್ಘಾಟಿಸಿ ಅವರು ಮಾತನಾಡುತಿದ್ದರು.
ಉಡುಪಿ ಡಾ.ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯದ ಸಮನ್ವಯಾಧಿಕಾರಿ ಡಾ.ಮಹಾಬಲೇಶ್ವರ ರಾವ್, ಗಾಂಧೀಜಿಯವರ ಸ್ವದೇಶೀಯತೆ ಮತ್ತು ಅಹಿಂಸತ್ವದ ಕಿರು ಪರಿಚಯ ಎಂಬ ವಿಷಯದ ಕುರಿತು ಮಾತನಾಡಿ, ಗಾಂಧೀಜಿಯ ಅಹಿಂಸೆ ಮತ್ತು ಸ್ವದೇಶೀಯತೆ ಬಗ್ಗೆ ಪರಿಚಯಿಸಿದರು. ಗಾಂಧಿಯ ವೇಷ ಹಾಕುವುದು ಸುಲಭ. ಆದರೆ ಅವರಂತೆ ಬದುಕುವುದು ಕಷ್ಟ ಎಂದರು.
ವಿದೇಶೀ ವಸ್ತುಗಳ ಬಗ್ಗೆ ವಿಶೇಷ ಮಮಕಾರ ಹೊಂದಿರುವ ನಾವು ಗಾಂಧೀಜಿಯ ಸ್ವದೇಶೀಯತೆ ಬಗ್ಗೆ ಊಹಿಸಲೂ ಬಯಸುವುದಿಲ್ಲ. ಸುಳ್ಳಿನ ಅರಮನೆಯಲ್ಲೇ ಬದುಕುವ ನಾವು ಸತ್ಯಸಂಧತೆ ಬಗ್ಗೆ ಅರಿಯುವುದು ಹೇಗೆ ಎಂದು ಕೇಳಿದ ಅವರು, ಹಿಂಸೆಯಿಂದಲೇ ಕಾರ್ಯ ಸಾಧಿಸುವ ನಾವು ಅಹಿಂಸೆಯನ್ನು ನಂಬಲು ಸಾಧ್ಯವೇ.... ಅದಕ್ಕೇ ಗಾಂಧೀಜಿ ರಾಷ್ಟ್ರಪಿತ ಎನಿಸಿ ಕೊಂಡದ್ದು, ಜಗದ್ವಿಖ್ಯಾತರಾಗಿದ್ದು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಗಾಂಧಿಯ ಅನುಯಾಯಿಯಾಗಿದ್ದ ಬೈಕಾಡಿ ವೆಂಕಟಕೃಷ್ಣ ರಾವ್ ಇವರ ಆತ್ಮಚರಿತ್ರೆಯ ಕುರಿತು ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಅಜಪುರ ಸಂಘದ ತಿಯಿಂದ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಉಡುಪಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸುಬ್ರಹ್ಮಣ್ಯ ಜೋಶಿ, ವಾರಂಬಳ್ಳಿ ಗ್ರಾಪಂ ಅಧ್ಯಕ್ಷ ನವೀನಚಂದ್ರ ನಾಯಕ್, ಉಪಪ್ರಾಂಶುಪಾಲ ಬಿ.ಟಿ.ನಾಯ್ಕಾ, ಎನ್ನೆಸ್ಸೆಸ್ ಘಟಕದ ಯೋಜ ನಾಧಿಕಾರಿ ಮತ್ತು ಕಾರ್ಯಕ್ರಮ ಸಂಘಟಕಿ ಸವಿತಾ ಎರ್ಮಾಳ್, ಅಶೋಕ ಭಟ್, ನಾರಾಯಣ ಮಡಿ, ಸೀತಾರಾಮ ಶೆಟ್ಟಿ, ಮಾಧವ ನಾಯ್ಕಿ, ಬಿವಿಟಿ ಮಣಿಪಾಲದ ಲಕ್ಷ್ಮೀಬಾಯಿ, ವಂದನಾ ನಾಯಕ್ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನೆಯ ಅನುಷ್ಠಾನಾಧಿಕಾರಿ ಡಾ.ಪೂರ್ಣಿಮಾ ಜೋಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲ ರವೀಂದ್ರ ಉಪಾಧ್ಯ ಸ್ವಾಗತಿಸಿದರು. ಜಯಂತಿ ಮತ್ತು ಪ್ರತಿಮ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಉಪನ್ಯಾಸಕ ಶಂಕರ ನಾಯ್ಕಾ ವಂದಿಸಿದರು.







