ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟಕ್ಕೆ ರೊಟ್ಟಿ, ಉಪ್ಪು ವಿತರಣೆ: ಉತ್ತರಪ್ರದೇಶ ಸರಕಾರಕ್ಕೆ ಎನ್‌ಎಚ್‌ಆರ್‌ಸಿ ನೋಟಿಸ್

ಲಕ್ನೋ, ಆ. 26: ಉತ್ತರಪ್ರದೇಶದ ಮಿರ್ಝಾಪುರದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟಕ್ಕೆ ರೊಟ್ಟಿ ಹಾಗೂ ಉಪ್ಪು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಉತ್ತರಪ್ರದೇಶದ ಮುಖ್ಯ ಕಾರ್ಯದರ್ಶಿಗೆ ನೋಟಿಸು ಜಾರಿ ಮಾಡಿದೆ.
ಈ ಪ್ರಕರಣದ ಕುರಿತು ವಿಸ್ತೃತ ವರದಿ ಸಲ್ಲಿಸುವಂತೆ ಆಯೋಗ ಸೂಚಿಸಿದೆ ಎಂದು ಹೇಳಿಕೆ ತಿಳಿಸಿದೆ. ಮಿರ್ಝಾಪುರದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಊಟಕ್ಕೆ ರೊಟ್ಟಿ ಹಾಗೂ ಉಪ್ಪು ನೀಡಲಾಗಿತ್ತು. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ನೋಟಿಸು ಜಾರಿ ಮಾಡಿದೆ. ಜಮಾಲಪುರ ಬ್ಲಾಕ್ಸ್‌ನಲ್ಲಿರುವ ಸಿಯೂರ್ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಮದ್ಯಾಹ್ನದ ಊಟಕ್ಕೆ ಓರ್ವ ಮಹಿಳೆ ರೊಟ್ಟಿ ಹಾಗೂ ಇನ್ನೋರ್ವ ಮಹಿಳೆ ಉಪ್ಪು ನೀಡುತ್ತಿರುವುದನ್ನು ವ್ಯಕ್ತಿಯೊಬ್ಬರು ವೀಡಿಯೊ ಮಾಡಿದ್ದರು. ಈ ವೀಡಿಯೊ ವೈರಲ್ ಆದ ಕೂಡಲೇ ಆಡಳಿತ ಇಬ್ಬರು ಶಿಕ್ಷಕಿಯರನ್ನು ಅಮಾನತುಗೊಳಿಸಿತ್ತು.
Next Story







