ಕಾಶ್ಮೀರ ವಿಷಯವನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸುವೆ: ಇಮ್ರಾನ್

ಇಸ್ಲಾಮಾಬಾದ್, ಆ. 26: ಪಾಕಿಸ್ತಾನದ ಕಾಶ್ಮೀರ ನೀತಿಯು ನಿರ್ಣಾಯಕ ಹಂತದಲ್ಲಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸೋಮವಾರ ಹೇಳಿದ್ದಾರೆ.
ದೇಶವನ್ನುದ್ದೇಶಿಸಿ ವಿಶೇಷ ಭಾಷಣ ಮಾಡಿದ ಅವರು, ‘‘ಪಾಕಿಸ್ತಾನದ ಕಾಶ್ಮೀರ ನೀತಿಯು ನಿರ್ಣಾಯಕ ಹಂತದಲ್ಲಿದೆ. ಹಾಗಾಗಿ, ಕಾಶ್ಮೀರ ವಿಷಯದಲ್ಲಿ ದೇಶವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ನಾನು ನಿರ್ಧರಿಸಿದ್ದೇನೆ’’ ಎಂದರು.
ಈ ವಿಷಯದಲ್ಲಿ ನಾನು ಸೆಪ್ಟಂಬರ್ 27ರಂದು ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಮಾತನಾಡುತ್ತೇನೆ ಹಾಗೂ ಕಾಶ್ಮೀರ ವಿಷಯವನ್ನು ಜಾಗತಿಕ ವೇದಿಕೆಯಲ್ಲಿ ಪ್ರಸ್ತಾಪಿಸುತ್ತೇನೆ ಎಂದರು.
Next Story





