ಇಂಡೋನೇಶ್ಯದ ರಾಜಧಾನಿ ಬೋರ್ನಿಯೊ ದ್ವೀಪಕ್ಕೆ ಸ್ಥಳಾಂತರ

ಜಕಾರ್ತ, ಆ. 26: ಇಂಡೋನೇಶ್ಯವು ತನ್ನ ರಾಜಧಾನಿಯನ್ನು ಕಿಕ್ಕಿರಿದ ಹಾಗೂ ಮುಳುಗುತ್ತಿರುವ ನಗರ ಜಕಾರ್ತದಿಂದ ಅರಣ್ಯಾವೃತ ಬೋರ್ನಿಯೊ ದ್ವೀಪದ ಪೂರ್ವದ ತುದಿಗೆ ಸ್ಥಳಾಂತರಿಸುವುದು ಎಂದು ದೇಶದ ಅಧ್ಯಕ್ಷ ಜೋಕೊ ವಿಡೋಡೊ ಸೋಮವಾರ ತಿಳಿಸಿದ್ದಾರೆ.
‘‘ಪ್ರಸ್ತಾಪಿತ ನೂತನ ರಾಜಧಾನಿಯು ಕನಿಷ್ಠ ಪ್ರಾಕೃತಿಕ ವಿಕೋಪಗಳ ಬೆದರಿಕೆಯನ್ನು ಹೊಂದಿದೆ ಹಾಗೂ ಅದು ಆಯಕಟ್ಟಿನ ಸ್ಥಳದಲ್ಲಿದೆ. ಅದು ಇಂಡೋನೇಶ್ಯದ ಮಧ್ಯದಲ್ಲಿದೆ ಹಾಗೂ ನಗರ ಪ್ರದೇಶಗಳಿಗೆ ಸಮೀಪದಲ್ಲಿದೆ’’ ಎಂದು ದೇಶವನ್ನುದ್ದೇಶಿಸಿ ಭಾಷಣ ಮಾಡಿದ ವಿಡೋಡೊ ಹೇಳಿದರು.
ರಾಜಧಾನಿಯನ್ನು ಸ್ಥಳಾಂತರಿಸುವ ಮೊದಲ ಪ್ರಸ್ತಾಪವನ್ನು ಅರ್ಧ ಶತಮಾನದ ಹಿಂದೆ ಸ್ವತಂತ್ರ ದೇಶದ ಸ್ಥಾಪಕ ಸುಕರ್ಣೊ ಮುಂದಿಟ್ಟಿದ್ದರು.
Next Story





