ಝೂರಿಚ್ ಆತಿಥ್ಯ
2020,2021 ಡೈಮಂಡ್ ಲೀಗ್ ಫೈನಲ್ಸ್
ಪ್ಯಾರಿಸ್, ಆ.26: ಝೂರಿಚ್ ನಗರ 2020 ಹಾಗೂ 2021ರ ಡೈಮಂಡ್ ಲೀಗ್‌ನ ಫೈನಲ್ ಪಂದ್ಯದ ಆತಿಥ್ಯವಹಿಸಿಕೊಳ್ಳಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
2010ರಲ್ಲಿ ಆರಂಭವಾದ ಡೈಮಂಡ್ ಲೀಗ್‌ನ ಎರಡು ಫೈನಲ್ಸ್‌ಗಳು ಸಾಂಪ್ರದಾಯಿಕವಾಗಿ ಝೂರಿಚ್ ಹಾಗೂ ಬ್ರುಸ್ಸೆಲ್‌ನಲ್ಲಿ ನಡೆಯುತ್ತದೆ. ಆದರೆ, ಮುಂದಿನ ಎರಡು ವರ್ಷ ಝೂರಿಚ್ ಫೈನಲ್‌ನ ಆತಿಥ್ಯವಹಿಸಿಕೊಳ್ಳಲಿದೆ.
ಬ್ರುಸ್ಸೆಲ್ಸ್‌ನ ಸ್ಟೇಡಿಯಂ ಮುಂದಿನ 2 ವರ್ಷ ನವೀಕರಣಗೊಳ್ಳಲಿದೆ, ಹೀಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ.
Next Story





