ಕಲಬುರಗಿಯಲ್ಲಿ ಭೀಕರ ರಸ್ತೆ ಅಪಘಾತ ; ಐದು ಸಾವು
![ಕಲಬುರಗಿಯಲ್ಲಿ ಭೀಕರ ರಸ್ತೆ ಅಪಘಾತ ; ಐದು ಸಾವು ಕಲಬುರಗಿಯಲ್ಲಿ ಭೀಕರ ರಸ್ತೆ ಅಪಘಾತ ; ಐದು ಸಾವು](https://www.varthabharati.in/sites/default/files/images/articles/2019/08/27/207142-1566880440.jpg)
ಕಲಬುರಗಿ, ಆ.27: ಕಲಬುರಗಿ ತಾಲೂಕಿನ ಸಾವಳಗಿ ಕ್ರಾಸ್ ಬಳಿ ನಿಂತಿದ್ದ ಲಾರಿಗೆ ಸ್ಕಾರ್ಪಿಯೋ ಕಾರು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಐವರು ಮೃತಪಟ್ಟ ಘಟನೆ ಸೋಮವಾರ ಮಧ್ಯರಾತ್ರಿ ನಡೆದಿದೆ.
ಮೃತರನ್ನು ಸೊಲ್ಲಾಪುರ ಜಿಲ್ಲೆಯ ಸಿಂಗಾಪುರ ಗ್ರಾಮದ ಸಂಜಯ್ ಕುಮಾರ್ ಚಡಚಣ(29), ರಾಣಿ ಸಂಜಯ್ ಚಡಚಣ(26), ಶ್ರೇಯಸ್ ಸಂಜಯ್ ಕುಮಾರ್ ಚಡಚಣ(3), ಭಾಗ್ಯಶ್ರೀ ಭೀಮಾಶಂಕರ್ ಅಲಗಿ(23) ಮತ್ತು ಧೀರಜ್ ಸಂಗಣ್ಣ(2) ಎಂದು ಗುರುತಿಸಲಾಗಿದೆ.
ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದು ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
Next Story