ಹಿಂದೂಗಳ ಮತಾಂತರ: ಪ್ರಾರ್ಥನಾ ಮಂದಿರಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಉಡುಪಿ, ಆ.27: ಹಿಂದುಗಳ ಮತಾಂತರ ಮಾಡುತ್ತಿರುವ ಮುಲ್ಕಿಯ ಡಿವೈನ್ ಕಾಲ್‌ಸೆಂಟರ್ ಪ್ರಾರ್ಥನಾ ಮಂದಿರವನ್ನು ರಾಜ್ಯ ಸರಕಾರ ಮುಚ್ಚಬೇಕು ಎಂದು ವಿಶ್ವ ಹಿಂದೂ ಪರಿಷತ್ ಒತ್ತಾಯಿಸಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಎಚ್‌ಪಿ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಡಿವೈನ್ ಕಾಲ್ ಸೆಂಟರ್‌ನಲ್ಲಿ ಹಿಂದು ಧರ್ಮದ ಅವಹೇಳನ ಮಾಡಿ ಉಡುಪಿಯ ಪ್ರದೀಪ್ ಎಂಬಾತನನ್ನು ಮತಾಂತರ ಮಾಡಲಾಗಿದೆ. ಈ ಬಗ್ಗೆ ಸೆಂಟರ್‌ನ ಅಬ್ರಹಾಂ ಹಾಗೂ ಐರಿಸ್ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.
ಪ್ರದೀಪ್‌ನನ್ನು ಬಲಾತ್ಕಾರದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಲು ಯತ್ನಿಸಿದ್ದ ಇವರನ್ನು ಕೂಡಲೇ ಬಂಧಿಸಬೇಕು. ಅದೇ ರೀತಿ ಅವಿಭಜಿತ ದ.ಕ. ಜಿಲ್ಲೆಗಳಲ್ಲಿ ಹಲವು ಸಂಸ್ಥೆಗಳು ಪ್ರಾರ್ಥನಾ ಮಂದಿರದ ಹೆಸರಿನಲ್ಲಿ ಹಿಂದೂ ಗಳ ಬಲಾತ್ಕಾರದ ಮತಾಂತರ ಮಾಡುತ್ತಿದ್ದು, ಇವುಗಳ ವಿರುದ್ಧವೂ ಕ್ರಮ ಕೈ ಗೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸುನೀಲ್ ಕೆ.ಆರ್., ಪ್ರಮೋದ್, ಸಂತೋಷ್ ಸುವರ್ಣ, ದಿನೇಶ್ ಮೆಂಡನ್ ಉಪಸ್ಥಿತರಿದ್ದರು.





