ರಕ್ಷಣಾ ಸಹಕಾರ ಹೆಚ್ಚಳಕ್ಕೆ ಪಾಕಿಸ್ತಾನ, ಚೀನಾ ಒಪ್ಪಂದ

ಇಸ್ಲಾಮಾಬಾದ್, ಆ. 27: ದ್ವಿಪಕ್ಷೀಯ ರಕ್ಷಣಾ ಸಹಕಾರ ಹೆಚ್ಚಿಸಲು ಹಾಗೂ ಪಾಕಿಸ್ತಾನಿ ಸೇನೆಯ ಸಾಮರ್ಥ್ಯವನ್ನು ವೃದ್ಧಿಸಲು ಪಾಕಿಸ್ತಾನ ಮತ್ತು ಚೀನಾ ಸೋಮವಾರ ಒಪ್ಪಂದವೊಂದಕ್ಕೆ ಸಹಿ ಹಾಕಿವೆ.
ಚೀನಾದ ಸೆಂಟ್ರಲ್ ಮಿಲಿಟರಿ ಕಮಿಶನ್ ಉಪಾಧ್ಯಕ್ಷ ಜನರಲ್ ಕ್ಸು ಕಿಲಿಯಾಂಗ್ ಉನ್ನತ ಮಟ್ಟದ ನಿಯೋಗದೊಂದಿಗೆ ರಾವಲ್ಪಿಂಡಿಯಲ್ಲಿರುವ ಪಾಕಿಸ್ತಾನಿ ಸೇನೆಯ ಪ್ರಧಾನ ಕಚೇರಿಗೆ ನೀಡಿದ ಭೇಟಿಯ ವೇಳೆ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಜನರಲ್ ಕ್ಸು ಪಾಕಿಸ್ತಾನಿ ಸೇನೆಯ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವ ಜೊತೆ ಒಬ್ಬರೇ ಮಾತುಕತೆ ನಡೆಸಿದರು ಹಾಗೂ ಬಳಿಕ ನಿಯೋಗ ಮಟ್ಟದ ಮಾತುಕತೆಗಳು ನಡೆದವು.
Next Story