ಮಂಗಳೂರು: ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ 2 ಟ್ರೋಫಿ, ಲಾಂಛನ ಬಿಡುಗಡೆ

ಮಂಗಳೂರು: ಬ್ಯಾರೀಸ್ ಸ್ಪೋರ್ಟ್ಸ್ ಪ್ರಮೋಟರ್ಸ್ ವತಿಯಿಂದ ನಡೆಯುವ ಮಂಗಳೂರು ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಸೀಸನ್-2 ಇದರ ಟ್ರೋಫಿ ಮತ್ತು ಲಾಂಛನ ಬಿಡುಗಡೆಯನ್ನು ದ.ಕ. ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಮತ್ತು ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಸ್ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ ಅವರು ಜಂಟಿಯಾಗಿ ಬಿಡುಗಡೆಗೊಳಿಸಿದರು.
ವೆಸ್ಟ್ ಲೈನ್ ಗ್ರೂಪ್ ಅಧ್ಯಕ್ಷ ನಾಸಿರ್ ಮುಹಮ್ಮದ್ ಟಿ-ಶರ್ಟ್ ಬಿಡುಗಡೆಗೊಳಿಸಿದರು.
ಸಮಾರಂಭದಲ್ಲಿ ಮಂಗಳಾ ಬ್ಯಾಡ್ಮಿಂಟನ್ ಅಧ್ಯಕ್ಷ ಸಿ.ಎಸ್. ಭಂಡಾರಿ, ವೆಸ್ಟೆರ್ನ್ ಫ್ಲೈವುಡ್ಸ್ ನ ಅಬ್ದುಲ್ ಲತೀಫ್, ಬ್ಯಾರೀಸ್ ಸ್ಪೋರ್ಟ್ಸ್ ಪ್ರಮೋಟರ್ಸ್ ಅಧ್ಯಕ್ಷ ನೂರ್ ಮುಹಮ್ಮದ್ ಮತ್ತು ಸದಸ್ಯರು ಉಪಸ್ಥಿತರಿದ್ದರು.
Next Story





