ಭಟ್ಕಳ: ಕಾರ್ಪೋರೇಶನ್ ಬ್ಯಾಂಕ್ ಎಟಿಎಂ ನಿಂದ ಗ್ರಾಹಕರಿಗೆ ತೊಂದರೆಯ ಆರೋಪ

ಭಟ್ಕಳ: ಕಾರ್ಪೋರೇಶನ್ ಬ್ಯಾಂಕಿನ ಭಟ್ಕಳ ಶಾಖೆಯ ಎಟಿಎಂ ಯಂತ್ರಗಳು ಗ್ರಾಹಕರಿಗೆ ತೊಂದರೆಯನ್ನು ಕೊಡುತ್ತಿದೆ ಎಂದು ದೂರಲಾಗಿದೆ.
ಇಲ್ಲಿನ ಕಾರ್ ಸ್ಟ್ರೀಟ್ ನಲ್ಲಿರುವ ಎಟಿಎಂ ಯಂತ್ರದಲ್ಲಿ ಹಣ ತೆಗೆಯಲು ಹೋದ ಗ್ರಾಹಕರಿಗೆ ಹಣವು ಹೊರಬರದೆ ಅತ್ತ ಯಂತ್ರದೊಳಗೆ ಹೋಗದೆ ಅರ್ದದಲ್ಲಿ ಸಿಲುಕಿಕೊಳ್ಳುತ್ತಿದೆ. ಹಣವನ್ನು ತೆಗೆಯಲು ಬಾರದೆ ಅತ್ತ ಅದನ್ನು ಹಾಗೆಯೇ ಬಿಟ್ಟು ಹೋಗದೆ ಇರುವ ಸಮಸ್ಯೆಯನ್ನು ಗ್ರಾಹಕರು ಎದುರಿಸುತ್ತಿದ್ದಾರೆ. ಅಲ್ಲದೆ ಯಂತ್ರದಲ್ಲಿ ಹತ್ತಾರು ಸಲ ಕಾರ್ಡ್ ಹಾಕಿದ ಬಳಿಕವಷ್ಟೆ ಹಣ ಬರುತ್ತದೆ, ಅದೂ ಪೂರ್ತಿ ಹೊರಬರದೆ ಅರ್ಧದಲ್ಲೇ ನಿಂತು ಬಿಡುತ್ತದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಬ್ಯಾಂಕಿನ ವ್ಯವಸ್ಥಾಪಕರು ಎಟಿಎಂ ಯಂತ್ರವನ್ನು ಸರಿಯಾಗಿಟ್ಟುಕೊಂಡು ಗ್ರಾಹರಿಗಾಗುವ ತೊಂದರೆಯನ್ನು ನೀಗಿಸಲಿ ಎಂಬ ಮಾತುಗಳು ಎಲ್ಲೆಡೆಯಿಂದ ಕೇಳಿಬರುತ್ತಿದೆ.
Next Story





