ವಿದ್ಯಾರ್ಥಿನಿಗೆ ಚೂರಿ ತೋರಿಸಿ ಬ್ಯಾಗ್ ಅಪಹರಿಸಿದ ಪ್ರಕರಣ: ಆರೋಪಿ ಸೆರೆ

ಮೂಡುಬಿದಿರೆ: ಎರಡು ವರ್ಷಗಳ ಹಿಂದೆ ಪಾಲಡ್ಕದ ಮಾವಿನಕಟ್ಟೆ ಎಂಬಲ್ಲಿ ಕಾಲೇಜು ವಿದ್ಯಾರ್ಥಿನಿಗೆ ಚೂರಿ ತೋರಿಸಿ ಬ್ಯಾಗ್ ಅಪಹರಿಸಿ ಪರಾರಿಯಾಗಿದ್ದ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಮುಚ್ಚೂರು ಗ್ರಾಮದ ನವೀನ್ ಗೌಡ (31)ಬಂಧಿತ ಆರೋಪಿ.
ಈತನ ಬಗ್ಗೆ ವಿದ್ಯಾರ್ಥಿನಿ ನೀಡಿದ್ದ ಮಾಹಿತಿ ಹಾಗೂ ಮೊಬೈಲ್‍ನ ಐಎಂಇ ನಂಬರ್ ಆಧಾರದಲ್ಲಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. ಮಂಗಳವಾರ ಬೆಳಗ್ಗೆ ಅಲಂಗಾರಿನಲ್ಲಿ ಪೊಲೀಸ್ ಇನ್‍ಸ್ಪೆಕ್ಟರ್ ಬಿ.ಎಸ್ ದಿನೇಶ್ ಕುಮಾರ್ ನೇತೃತ್ವದ ಪೊಲೀಸ್ ತಂಡ ವಾಹನ ತಪಾಸಣೆ ನಡೆಸುತ್ತಿದ್ದಾಗ ಆಕ್ಟಿವಾದಲ್ಲಿ ಬಂದ ಆರೋಪಿಯನ್ನು ಅನುಮಾನದ ಮೇಲೆ ತಡೆದು ವಿಚಾರಣೆ ನಡೆಸಿದಾಗ 2017ರಲ್ಲಿ ಮಾವಿನಕಟ್ಟೆಯಲ್ಲಿ ನಡೆದ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





