ಅಳೇಕಲ ಮಸೀದಿಯ ವಾರ್ಷಿಕ ಸಭೆ, ಪದಾಧಿಕಾರಿಗಳ ಆಯ್ಕೆ

ಉಳ್ಳಾಲ: ಅಲ್ ಮಸ್ಜಿದುಲ್ ಜಾಮಿಉಲ್ ಅಮೀನ್ ಅಳೇಕಲ ಉಳ್ಳಾಲ ಇದರ ದ್ವಿ ವಾರ್ಷಿಕ ಮಹಾಸಭೆಯು ನಜಾತು ಸ್ಸಿಬಿಯಾನ್ ಮದ್ರಸ ಹಾಲ್ ನಲ್ಲಿ ಯು.ಎಸ್ ಹಂಝ ಹಾಜಿ ಅಧ್ಯಕ್ಷತೆಯಲ್ಲಿ ನಡೆಯಿತು.
ಮಸೀದಿಯ ಖತೀಬ್ ಅಲ್ ಹಾಜ್ ಅಬೂ ಝಿಯಾದ್ ಮದನಿ ಪಟ್ಟಾಂಬಿ ದುಆ ನಡೆಸಿ ಆಶೀರ್ವಚನ ನೀಡಿದರು. ಹಾಲಿ ಸಮಿತಿ ಸದಸ್ಯ ರನ್ನು ಬರ್ಕಾಸ್ತಿಗೊಳಿಸಿ 2019-21 ನೇ ಸಾಲಿಗೆ ನೂತನ ಸಮಿತಿ ಸದಸ್ಯ ರನ್ನು ನೇಮಕ ಮಾಡಲಾಯಿತು.
ಹಂಗಾಮಿ ಅಧ್ಯಕ್ಷರಾಗಿ ಹಾಜಿ ಯು ಎಸ್ ಹಂಝ ರನ್ನು ಆಯ್ಕೆಮಾಡಲಾಯಿತು. ನಂತರ ನಡೆದ ಸಭೆಯಲ್ಲಿ ಅಧ್ಯಕ್ಷರಾಗಿ ಪಿ.ಎಸ್ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ ರನ್ನು ಆಯ್ಕೆಮಾಡಲಾಯಿತು. ಉಪಾಧ್ಯಕ್ಷರಾಗಿ ಅಶ್ರಫ್ ಯು.ಡಿ, ಪ್ರ. ಕಾರ್ಯದರ್ಶಿಯಾಗಿ ಯು ಫಾರೂಕ್, ಕಾರ್ಯದರ್ಶಿಯಾಗಿ ಶರೀಫ್ ಕಕ್ಕೆತೋಟ, ಜಾಫರ್ ಯು ಎಸ್, ಕೋಶಾಧಿಕಾರಿಯಾಗಿ ಯು.ಸಿ ಇಬ್ರಾಹಿಂ, ಮಸೀದಿ ಸಂಚಾಲಕರಾಗಿ ನಝೀರ್, ಮದ್ರಸ ಸಂಚಾಲಕರಾಗಿ ರಿಯಾಝ್ ರನ್ನು ಆರಿಸಲಾಯಿತು.
ಸಮಿತಿ ಸದಸ್ಯ ರಾಗಿ ಹಾಜಿ ಯು ಎಸ್ ಹಂಝ, ರವೂಫ್ ಹಾಜಿ, ಪುತ್ತುಬಾವ ಹಾಜಿ, ಅಬ್ದುಲ್ ಖಾದರ್, ಜಲಾಲ್ ತಂಙಲ್, ಅನ್ಸಾರ್ ಮಾಲಿಕ್, ಅಶ್ರಫ್ ಸುಲ್ಯ, ಬಶೀರ್ , ಅಬ್ಬಾಸ್ ಪಾಂಡೆಲ್, ರಶೀದ್ ಪಾಂಡೆಲ್, ಸಮದ್, ರಫೀಕ್ ಯು ಎಸ್, ನವಾಝ್, ಉಮ್ಮರಬ್ಬ ಕಕ್ಕೆತೋಟ, ರಹ್ಮತ್, ಯಾಕೂಬ್ ಪಾಂಡೆಲ್, ಲತೀಫ್ ರನ್ನು ಆರಿಸಲಾಯಿತು.





