ಆಟವಾಡುತ್ತಿದ್ದಾಗ ಮರಳಿನ ದಿಬ್ಬ ಕುಸಿದು ಮೂವರು ಮಕ್ಕಳು ಮೃತ್ಯು
![ಆಟವಾಡುತ್ತಿದ್ದಾಗ ಮರಳಿನ ದಿಬ್ಬ ಕುಸಿದು ಮೂವರು ಮಕ್ಕಳು ಮೃತ್ಯು ಆಟವಾಡುತ್ತಿದ್ದಾಗ ಮರಳಿನ ದಿಬ್ಬ ಕುಸಿದು ಮೂವರು ಮಕ್ಕಳು ಮೃತ್ಯು](https://www.varthabharati.in/sites/default/files/images/articles/2019/08/28/207353-1566995615.jpg)
ಗಂಗಾವತಿ, ಆ.28: ಹಳ್ಳದ ಮರಳಿನ ದಿಬ್ಬ ಕುಸಿದು ಮೂವರು ಮಕ್ಕಳು ಮೃತಪಟ್ಟ ಹೃದಯವಿದ್ರಾವಕ ಘಟನೆ ಗಂಗಾವತಿ ತಾಲೂಕಿನ ನವಲಿ ಗ್ರಾಮದ ಹಳ್ಳದಲ್ಲಿ ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ನಡೆದಿದೆ.
ಕವಿತಾ(3) ಸವಿತಾ(2) ಸೋನಂ(1) ಮೃತ ಮಕ್ಕಳಾಗಿದ್ದು, ಇವರು ಉದ್ಯೋಗ ಹರಸಿ ಮಹಾರಾಷ್ಟ್ರದಿಂದ ಆಗಮಿಸಿದ ಕೂಲಿಕಾರರ ಮಕ್ಕಳಾಗಿದ್ದಾರೆ.
ಮಹಾರಾಷ್ಟ್ರದಿಂದ ಕೆಲ ಅಲೆಮಾರಿ ಕುಟುಂಬಗಳು ಕೂಲಿಯನ್ನು ಅರಸಿ ನವಲಿ ಎಂಬ ಗ್ರಾಮದಲ್ಲಿ ನೆಲೆಸಿತ್ತು. ಇಂದು ಮನೆಯ ಮುಂದೆ ಮಕ್ಕಳು ಆಟವಾಡುತ್ತಿದ್ದ ವೇಳೆ ಮರಳಿನ ಗುಡ್ಡ ಕುಸಿದು ಮೂವರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೂ ಕೆಲ ಮಕ್ಕಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಕನಕಗರಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.
Next Story