ನಕಲಿ ಚಿನ್ನ ನೀಡಿ 25ಲಕ್ಷ ರೂ. ವಂಚನೆ: ದೂರು
ಕಾರ್ಕಳ, ಆ.28: ಚಿನ್ನಾಭರಣ ತಯಾರಿಸುವ ಕಾರ್ಕಳ ಪೆರ್ವಾಜೆ ರಸ್ತೆಯ ಸುಧೀರ್ ಪಾಟೀಲ್(38) ಎಂಬವರಿಗೆ ತಂಡವೊಂದು ನಕಲಿ ಚಿನ್ನದ ಸರ ನೀಡಿ ಲಕ್ಷಾಂತರ ರೂ. ವಂಚಿಸಿರುವ ಘಟನೆ ನಡೆದಿದೆ.
ಚಿನ್ನಾಭರಣಗಳನ್ನು ತಯಾರಿಸಿ ಜ್ಯುವೆಲ್ಲರಿಗಳಿಗೆ ಮಾರಾಟ ಮಾಡುತ್ತಿದ್ದ ಸುಧೀರ್ ಹಳೆಯ ಚಿನ್ನವನ್ನು ಖರೀದಿಸುತ್ತಿದ್ದರು. ಆರೋಪಿಗಳಾದ ವಜ್ರೇಶ್ ಕುಮಾರ್, ಇಕ್ಬಾಲ್, ಜಾವೇದ್, ಅಶ್ಪಕ್ ಅಕ್ಬರ್, ಲೋಕೇಶ, ರಾಜು ಸಚಿನ್ ಹಾಗೂ ಇನ್ನೊರ್ವ ಒಳಸಂಚು ನಡೆಸಿ ಮೇ 14ರಂದು ಸುಧೀರ್ ಪಾಟೀಲ್‌ಗೆ ಚಿನ್ನ ಎಂದು ಹೇಳಿ ಒಂದು ಕೆ.ಜಿ 300 ಗ್ರಾಂ ಹಳದಿ ಲೇಪನ ಮಾಡಿದ ಲೋಹದ ಸರಗಳನ್ನು 25ಲಕ್ಷ ರೂ.ಗೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬಿಕ್ಕೋಡು ಎಂಬಲ್ಲಿ ನೀಡಿದ್ದರು.
ಇವರು ಈ ಚಿನ್ನದ ಸರಗಳನ್ನು ಕಾರ್ಕಳಕ್ಕೆ ತಂದು ಆ.27ರಂದು ಅಂಗಡಿ ಯಲ್ಲಿ ಕರಗಿಸಿ ಬೇರೆ ಆಭರಣ ಮಾಡಲು ಪ್ರಯತ್ನಿಸಿದಾಗ ಆರೋಪಿಗಳು ನೀಡಿರುವುದು ಹಳದಿ ಲೇಪನದ ಬೇರೆ ಲೋಹದ ಸರಗಳು ಎಂಬುದು ತಿಳಿಯಿತು. ಆರೋಪಿಗಳು ಹಣ ಗಳಿಸುವ ಉದ್ದೇಶದಿಂದ ಒಳಸಂಚು ನಡೆಸಿ ನಕಲಿ ಚಿನ್ನವನ್ನು ಮಾರಾಟ ಮಾಡುವ ಮೂಲಕ 25ಲಕ್ಷ ರೂ. ಮೋಸ ಮಾಡಿ ದ್ದಾರೆ ಎಂದು ಕಾರ್ಕಳ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.





