ಆ.30: ಮುಸ್ಲಿಮ್ ಮಹಿಳೆಯರಿಗೆ ಮಾರ್ಗದರ್ಶನ ಶಿಬಿರ
ಮಂಗಳೂರು, ಆ.28: ಹಿದಾಯ ಫೌಂಡೇಶನ್‌ನ ಅಂಗ ಸಂಸ್ಥೆಯಾದ ಹಿದಾಯ ಮೆಸ್ಕೊ ಅರಬಿಕ್ ಅಕಾಡಮಿಯು ಮುಸ್ಲಿಮ್ ಮಹಿಳೆಯರಿಗಾಗಿ ‘ಮನಸ್ಸಿನ ನಿಗ್ರಹ ಹೇಗೆ?’ ಎಂಬ ವಿಷಯದಲ್ಲಿ ಆ.30ರಂದು ಅಪರಾಹ್ನ 3 ಗಂಟೆಗೆ ನಗರದ ಕಂಕನಾಡಿಯ ಶಾಲಿಮಾರ್ ವಾಣಿಜ್ಯ ಸಂಕೀರ್ಣದ ಐದನೇ ಮಹಡಿಯಲ್ಲಿರುವ ಹಿದಾಯ ಮೆಸ್ಕೊ ಅರಬಿಕ್ ಅಕಾಡಮಿಯಲ್ಲಿ ಮಾರ್ಗದರ್ಶನ ಶಿಬಿರವನ್ನು ಹಮ್ಮಿಕೊಂಡಿದೆ.
ಒತ್ತಡ ರಹಿತ ಜೀವನ ನಿರ್ವಹಣಾ ಕೌಶಲ, ಮಾನಸಿಕ ಮತ್ತು ದೈಹಿಕ ಆರೋಗ್ಯ ರಕ್ಷಣೆ ಹಾಗೂ ಕೌಟುಂಬಿಕ ಸಂಬಂಧಗಳ ವೃದ್ಧಿ ಶಿಬಿರದ ಪ್ರಮುಖ ಚರ್ಚಾ ವಿಷಯಗಳಾಗಿದ್ದು, ನುರಿತ ವಿಷಯ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಪ್ರವೇಶ ಉಚಿತವಾಗಿದ್ದು, ಆಸಕ್ತರು ಮೊ.ಸಂ: 8951302476 ಅಥವಾ 9632673626ಗೆ ಕರೆಮಾಡಿ ಹೆಸರು ನೋಂದಾಯಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





