‘ಗುರುಗಳಿಗೆ ನಮನ’ ಸ್ವರಚಿತ ಕವನ ರಚನಾ ಸ್ಪರ್ಧೆ
ಭಟ್ಕಳ, ಆ.28: ಶಿಕ್ಷಕ ದಿನಾಚರಣೆಯ ಅಂಗವಾಗಿ ಶಿಕ್ಷಕರಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕವನ ರಚನಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ ‘ಗುರುಗಳಿಗೆ ನಮನ’ ಎಂಬ ವಿಷಯದ ಕುರಿತು ಸ್ವರಚಿತ ಕವನ ರಚನಾ ಸ್ಪರ್ಧೆಯನ್ನುಆಯೋಜಿಸಲಾಗಿದ್ದು, ಸ್ಪರ್ಧೆಯು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಪ್ರತ್ಯೇಕವಾಗಿಯೇ ನಡೆಯಲಿದೆ ಎಂದು ತಿಳಿಸಲಾಗಿದೆ.
ಆಸಕ್ತ ಶಿಕ್ಷಕರು ತಮ್ಮ ಸ್ವರಚಿತ ಕವಿತೆಯನ್ನು ಆಗಸ್ಟ್ 31ನೇ ಶನಿವಾರ ಸಂಜೆ 5 ಗಂಟೆಯ ಒಳಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಶಿಕ್ಷಣ ಸಂಯೋಜಕ ಶಂಕರಉಪ್ಪರಗಿಮನೆ ಅವರ ಬಳಿ ತಲುಪಿಸಬೇಕು ಎಂದು ಕಸಾಪ ತಾಲೂಕು ಅಧ್ಯಕ್ಷ ಗಂಗಾಧರ ನಾಯ್ಕ ಕೋರಿದ್ದಾರೆ.ಹೆಚ್ಚಿನ ಮಾಹಿತಿಗಾಗಿ 9448756091, 9141111611 ದೂರವಾಣಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
Next Story





