ಪ್ರೊ ಕಬಡ್ಡಿ: ಹರ್ಯಾಣಕ್ಕೆ ಭರ್ಜರಿ ಜಯ
ಮಿಂಚಿದ ಪ್ರಶಾಂತ್ ಕುಮಾರ್ ರೈ

ಹೊಸದಿಲ್ಲಿ, ಆ.28: ಕನ್ನಡಿಗ ಪ್ರಶಾಂತ್ ಕುಮಾರ್ ರೈ ಹಾಗೂ ವಿಕಾಸ್ ಖಂಡೋಲ ಸಾಹಸದ ನೆರವಿನಿಂದ ಹರ್ಯಾಣ ತಂಡ ಬುಧವಾರ ಇಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್‌ನ 62ನೇ ಪಂದ್ಯದಲ್ಲಿ ಗುಜರಾತ್ ಫೋರ್ಚುನ್‌ಜೈಂಟ್ಸ್ ತಂಡವನ್ನು 41-25 ಅಂಕಗಳ ಅಂತರದಿಂದ ಮಣಿಸಿದೆ.
ಹರ್ಯಾಣದ ಪರ ವಿಕಾಸ್ ಹಾಗೂ ಪ್ರಶಾಂತ್ ತಲಾ 8 ಅಂಕ ಗಳಿಸಿದರೆ, ವಿನಯ್ ಏಳಂಕ ಗಳಿಸಿ ತಂಡದ ಗೆಲುವಿಗೆ ನೆರವಾದರು. ಗುಜರಾತ್‌ನ ಪರ ಮೋರೆ ಜಿಬಿ ಹಾಗೂ ರೋಹಿತ್ ತಲಾ 4 ಅಂಕ ಗಳಿಸಿದರು. ಹರ್ಯಾಣ ತಾನಾಡಿದ 11ನೇ ಪಂದ್ಯದಲ್ಲಿ 7ನೇ ಗೆಲುವು ದಾಖಲಿಸಿ ಒಟ್ಟು 36 ಅಂಕಗಳಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಮತ್ತೊಂದೆಡೆ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ಮುಂದುವರಿಸಿದ ಗುಜರಾತ್ ತಾನಾಡಿದ್ದ 11ನೇ ಪಂದ್ಯದಲ್ಲಿ 7ನೇ ಸೋಲು ಕಂಡಿದೆ.
Next Story





