ಡಿಡಿಸಿಎ ಹಿರಿಯರ ಆಯ್ಕೆ ಸಮಿತಿಗೆ ಅತುಲ್ ವಾಸನ್ ಅಧ್ಯಕ್ಷ

ಹೊಸದಿಲ್ಲಿ, ಆ.28: ಭಾರತದ ಮಾಜಿ ವೇಗದ ಬೌಲರ್ ಅತುಲ್ ವಾಸನ್ ದಿಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಹಿರಿಯರ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಬುಧವಾರ ಆಯ್ಕೆಯಾಗಿದ್ದಾರೆ.
ವಾಸನ್ ನೇತೃತ್ವದ ಸಮಿತಿಯಲ್ಲಿ ಅನಿಲ್ ಭಾರದ್ವಾಜ್ ಹಾಗೂ ವಿನೀತ್ ಜೈನ್ ಅವರಿದ್ದಾರೆ. ಇದೇ ವೇಳೆ, ಮಾಯಾಂಕ್ ತೆಹ್ಲಾನ್‌ರನ್ನು ಜೂನಿಯರ್ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಡಿಡಿಸಿಎ ಆಯ್ಕೆ ಮಾಡಿದೆ. ತ್ರಿಸದಸ್ಯರ ಸಮಿತಿಯಲ್ಲಿ ಚೇತನ್ ಶರ್ಮಾ ಹಾಗೂ ಪ್ರದೀಪ್ ಚಾವ್ಲಾ ಅವರಿದ್ದಾರೆ.
Next Story





