ಚೀನಾ, ವ್ಯಾಟಿಕನ್ ಜಂಟಿಯಾಗಿ ಮೊದಲ ಬಿಶಪ್ ನೇಮಕ

ಬೀಜಿಂಗ್, ಆ. 28: ಚೀನಾ ಮತ್ತು ವ್ಯಾಟಿಕನ್ ನಡುವೆ ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಏರ್ಪಟ್ಟ ಒಪ್ಪಂದದಂತೆ, ಚೀನಾ ಕಮ್ಯುನಿಸ್ಟ್ ಪಕ್ಷ ಮತ್ತು ಪೋಪ್ ಮೊದಲ ಬಾರಿಗೆ ಬಿಶಪ್ ಒಬ್ಬರನ್ನು ಜಂಟಿಯಾಗಿ ನೇಮಿಸಿದ್ದಾರೆ.
ಉತ್ತರ ಚೀನಾದಲ್ಲಿನ ಸ್ವಾಯತ್ತ ವಲಯ ಇನ್ನರ್ ಮಂಗೋಲಿಯದ ಯಾವೊ ಶುನ್ ಬಿಶಪ್ ಆಗಿ ನೇಮಕಗೊಂಡವರು. ಇದು ಚೀನಾದಲ್ಲಿ ಕ್ರೈಸ್ತ ಧರ್ಮದ ಮೇಲೆ ಆಗಾಗ್ಗೆ ನಡೆಯುತ್ತಿರುವ ದಮನ ಕೃತ್ಯಗಳ ನಡುವೆಯೇ, ಚೀನಾ ಮತ್ತು ವ್ಯಾಟಿಕನ್ ನಡುವಿನ ಬದಲಾದ ಸಂಬಂಧಕ್ಕೆ ಸಾಕ್ಷಿಯಾಗಿದೆ.
ಕಳೆದ ವರ್ಷ ಏರ್ಪಟ್ಟ ಒಪ್ಪಂದವು, ಚೀನಾ ಕಮ್ಯುನಿಸ್ಟ್ ಪಕ್ಷವು ನಡೆಸುವ ಚರ್ಚ್‌ಗಳಲ್ಲಿ ಬಿಶಪ್‌ಗಳ ನೇಮಕಾತಿಯಲ್ಲಿ ವ್ಯಾಟಿಕನ್‌ಗೂ ಅಧಿಕಾರ ನೀಡುತ್ತದೆ. ವ್ಯಾಟಿಕನ್ ಮತ್ತು ಚೀನಾ ಕಮ್ಯುನಿಸ್ಟ್ ಪಕ್ಷದ ನಡುವಿನ ಸಂಬಂಧವು 1950ರ ದಶಕದಿಂದಲೂ ಹಳಸಿತ್ತು. ತೈವಾನ್ ಜೊತೆಗಿನ ವ್ಯಾಟಿಕನ್‌ನ ಸಂಬಂಧದ ಹಿನ್ನೆಲೆಯಲ್ಲಿ ಅದು ಮತ್ತಷ್ಟು ಹಳಸಿತ್ತು.
Next Story





