ವಿಶಾಖಪಟ್ಟಣಂ: ಮೂವರು ನಕ್ಸಲೀಯರು ಶರಣು
ವಿಶಾಖಪಟ್ಟಣಂ, ಆ. 29: ಮೂವರು ನಕ್ಸಲೀಯರು ಬುಧವಾರ ಆಂಧ್ರಪ್ರದೇಶ ಪೊಲೀಸರ ಮುಂದೆ ಶರಣಾಗತರಾಗಿದ್ದಾರೆ. ಪಾದೆರು ಉಪ ಪೊಲೀಸ್ ಅದೀಕ್ಷಕ ರಾಜ್‌ಕಮಲ್ ಮುಂದೆ ಈ ನಕ್ಸಲೀಯರು ಶರಣಾಗಿದ್ದಾರೆ.
ವಿಶಾಖಪಟ್ಟಣಂನ ಜಿ.ಕೆ. ವೀದಿ ಮಂಡಲ್‌ನಲ್ಲಿರುವ ಮಂಡಪಳ್ಳಿ ಗ್ರಾಮದ ಸಮೀಪ ಆಗಸ್ಟ್ 20ರಂದು ಭದ್ರತಾ ಸಿಬ್ಬಂದಿ ಹಾಗೂ ನಕ್ಸಲೀಯರ ನಡುವೆ ಗುಂಡಿನ ಚಕಮಕಿ ನಡೆದ ಬಳಿಕ ಈ ಬೆಳವಣಿಗೆ ನಡೆದಿದೆ.
ಈ ಹಿಂದೆ ಆಗಸ್ಟ್ 17ರಂದು ಓರ್ವ ವಿಭಾಗೀಯ ಸಮಿತಿ (ಡಿಸಿಎಂ) ಹಾಗೂ ಇಬ್ಬರು ಪ್ರದೇಶ ಸಮಿತಿ ಸದಸ್ಯ (ಎಸಿಎಂ)ರು ಸೇರಿದಂತೆ ಮೂವರು ಸಿಪಿಐ (ಮಾವೋವಾದಿ) ನಕ್ಸಲರು ವಿಶಾಖಪಟ್ಟಣಂ ಪೊಲೀಸರ ಮುಂದೆ ಶರಣಾಗತರಾಗಿದ್ದರು.
Next Story





