ದಲಿತ ವಿವಾಹಕ್ಕೆ ಪೌರೋಹಿತ್ಯ ನಿರಾಕರಣೆ: ಆರೋಪಿ ಖುಲಾಸೆ
ಉಡುಪಿ, ಆ.30: ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮದ ಅಣ್ಣಪ್ಪಯ್ಯ ಸಭಾಭವನದಲ್ಲಿ ಪರಿಶಿಷ್ಟ ವರ್ಗದವರ ವಿವಾಹಕ್ಕೆ ಪೌರೋಹಿತ್ಯ ವಹಿಸಲು ನಿರಾಕರಿಸಿದ ಪ್ರಕರಣದ ಆರೋಪಿಯನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದೋಷಮುಕ್ತಗೊಳಿಸಿ ಇಂದು ಆದೇಶ ನೀಡಿದೆ.
ಗುಜ್ಜಾಡಿ ಗ್ರಾಮದ ಪುರೋಹಿತ ಕೃಷ್ಣಮೂರ್ತಿ ಭಟ್ ಯಾನೆ ಬಾಬಣ್ಣ ಭಟ್ ದೋಷಮುಕ್ತಗೊಂಡ ಆರೋಪಿ. 2013ರ ಜೂ.5ರಂದು ವಿವಾಹ ಸಮಾರಂಭದಲ್ಲಿ ಸಾವಿರಾರು ಜನರ ಮುಂದೆ ಆರೋಪಿ ರಾದ್ಧಾಂತ ಮಾಡಿ ಅವಮಾನಿಸಿರುವುದಾಗಿ ವಧುವಿನ ಅಣ್ಣ ಗಂಗೊಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ಆಗಿನ ಕುಂದಾಪುರ ಡಿವೈಎಸ್ಪಿ ಸುಮನಾ ಆರೋಪಿ ವಿರುದ್ಧ ದೋಷಾ ರೋಪಣಾ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶ ಸಿ.ಎಂ.ಜೋಶಿ ಆರೋಪಿಯನ್ನು ದೋಷಮುಕ್ತಗೊಳಿಸಿ ಆದೇಶ ನೀಡಿದರು. ಆರೋಪಿ ಪರವಾಗಿ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ವಾದಿಸಿದ್ದರು.
Next Story





