ಹೈಕೋರ್ಟ್ ನ್ಯಾ.ಎಲ್.ನಾರಾಯಣಸ್ವಾಮಿ ಹಿಮಾಚಲ ಪ್ರದೇಶ ಸಿಜೆ ಹುದ್ದೆಗೆ ಶಿಫಾರಸು

ಬೆಂಗಳೂರು, ಆ.30: ಕರ್ನಾಟಕ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಅವರನ್ನು ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಸುಪ್ರೀಂಕೋರ್ಟ್‌ನ ಕೊಲಿಜಿಯಂ ಶಿಫಾರಸು ಮಾಡಿದೆ.
1959ರ ಜು.1ರಂದು ಜನಿಸಿರುವ ಎಲ್.ನಾರಾಯಣಸ್ವಾಮಿ ಅವರು 1987ರಲ್ಲಿ ಹೈಕೋರ್ಟ್‌ನಲ್ಲಿ ವಕೀಲ ವೃತ್ತಿಯನ್ನು ಪ್ರಾರಂಭಿಸಿ, ಪಿಐಎಲ್, ಭೂ ಸುಧಾರಣೆ, ಭೂ ಕಂದಾಯ ಸೇರಿ ಇನ್ನಿತರ ವ್ಯಾಜ್ಯಗಳ ಕುರಿತು ವಾದ ಮಂಡಿಸಿದ್ದಾರೆ. 1995 ರಿಂದ 1999ರವರೆಗೆ ಸರಕಾರಿ ವಕೀಲರಾಗಿ, 2007ರ ಜು.4ರಂದು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ, 2009ರ ಎ.18ರಂದು ಖಾಯಂ ನ್ಯಾಯಮೂರ್ತಿಯಾಗಿ ಹಾಗೂ 2019ರ ಜ.17ರಿಂದ ಮೇ 9ರವರೆಗೆ ಹೈಕೋರ್ಟ್‌ನ ಹಂಗಾಮಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ನಾರಾಯಣಸ್ವಾಮಿ ಅವರನ್ನು ಹಿಮಾಚಲಪ್ರದೇಶ ಹೈಕೋರ್ಟ್‌ನ ಸಿಜೆ ಹುದ್ದೆಗೆ ಕೊಲಿಜಿಯಂ ಶಿಫಾರಸು ಮಾಡಿದೆ.
Next Story





