ಆಯನ ತಂಡದಿಂದ ದ್ವೀಪ ನಾಟಕ ಪ್ರದರ್ಶನ
ಮಂಗಳೂರು : ಕಳೆದ ಮೂರು ದಶಕಗಳ ಹಿಂದೆ ರೂಪುಗೊಂಡ ಆಯನ ಹವ್ಯಾಸಿ ನಾಟಕ ಸಂಸ್ಥೆ ಪಾದುವಾ ನಂತೂರು ಕಾಲೇಜಿನಲ್ಲಿ ಪದುವಾ ಕಾಲೇಜು ರಂಗ ವೇದಿಕೆಯಲ್ಲಿ ಅಥೋಲ್ ಪ್ಯೂಗಾರ್ಡ್ ಜೋನ್ ಕನಿ ನ್ಸುತೋನ್ ರಚಿತ ‘ದಿ ಐಲ್ಯಾಂಡ್’ ನಾಟಕವನ್ನು ಎಸ್.ರಮೇಶ್‌ರಿಂದ ಕನ್ನಡ ರೂಪಾಂತರಿಸಿದ ‘ದ್ವೀಪ ’ ನಾಟಕ ನಿಸಾಸಂ ಪದವೀಧರ ಖ್ಯಾತ ನಟ,ನಿರ್ದೇಶಕ ಕೆ.ಪಿ.ಲಕ್ಷ್ಮಣ್ ಅವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸಿ ಜೈಲು ಸೇರಿದ ಇಬ್ಬರು ಖೈದಿಗಳ ಬದುಕಿನ ಜೊತೆಗೆ ‘ಅಂತಿಗೊನೆ ’ ಕುರಿತು ನಾಟಕದಲ್ಲಿ ತಮ್ಮ ತೊಡಗಿಸಿಕೊಂಡು ತಮ್ಮ ಬದುಕಿನಲ್ಲಿ ತಮಗಾದ ಅನ್ಯಾಯದ ವಿರುದ್ಧ ಪ್ರತಿರೊಧವನ್ನು ,ಜೀವನ ಸ್ಫೂರ್ತಿಯನ್ನು ,ಬದುಕಿನ ಪ್ರೀತಿಯನ್ನು ಚಂದ್ರಹಾಸ ಉಳ್ಳಾಲ್ ಕದಿ ನಂಬ್ರ 17 ಹಾಗೂ ಪ್ರಭಾಕರ್ ಕಾಪಿಕಾಡ್ ಕೈದಿ ನಂಬ್ರ 18ಪಾತ್ರಗಳ ಅಭಿವ್ಯಕ್ತಿಸುವ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಭಿಪ್ರಾಯವನ್ನು ಹೊಂದುವುದು ದೇಶದ್ರೋಹವೆ ?ಎನ್ನುವ ಪ್ರಶ್ನೆಯನ್ನು ಪ್ರೇಕ್ಷಕರ ಮುಂದಿಡುತ್ತದೆ.ದ್ವೀಪ ನಾಟಕದಲ್ಲಿ ಬದುಕಿನ ಪ್ರೀತಿಯನ್ನು ಉಳಿಸಿಕೊಂಡ ಸಾಮಾನ್ಯರಲ್ಲಿ ಸಾಮಾನ್ಯ ಮನುಷ್ಯರ ನಡುವಿನ ಹೋರಾಟದ ಬದುಕನ್ನು ಒಳಗೊಂಡಿದೆ.
ದಕ್ಷಿಣ ಆಫ್ರೀಕಾದ ಇಬ್ಬರು ವರ್ಣಬೇಧದ ನಡುವೆ ಬೆಳೆದ ಇಬ್ಬರು ಕರಿಯ ಜನ ಸಮುದಾಯಕ್ಕೆ ಸೇರಿದ ಇಬ್ಬರು ನಟರು,ಮಾನವಹಕ್ಕು,ಸ್ವಾಭಿಮಾನದ ಬದುಕು,ಮಾನವ ಹಕ್ಕುಗಳಿಗಾಗಿ ಅದರ ವಿರುದ್ಧವಿರುವ ಪ್ರಭುತ್ವ ಜೊತೆ ಚಳವಳಿ,ಹೋರಾಟದಲ್ಲಿ ತೊಡಗಿಸಿಕೊಂಡು ಜೈಲು ಸೇರಿ ದ್ವೀಪವೊಂದರಲ್ಲಿ ಬಂಧಿಯಾದ ಬಳಿಕ ಅಲ್ಲಿ ಅವರು ತಮ್ಮ ಬದುಕನ್ನು ಕಳೆಯುವ ಸಂದರ್ಭದಲ್ಲಿ ಅವರೊಳಗಿನ ದ್ವಂದ,ತುಮುಲವನ್ನು ಈ ನಾಟಕದಲ್ಲಿ ನಟರು ಮನೋಜ್ಞವಾಗಿ ಅಭಿನಯಿಸಿ ತೋರಿಸಿದ್ದಾರೆ.
ಆಯನ ತಂಡದ ಸಂಚಾಲಕ ಮೋಹನ್ ಚಂದ್ರ ಕಲಾವಿದರನ್ನು ಪರಿಚಯಿಸಿದರು.







