ಸಿಂಡಿಕೇಟ್-ಕೆನರಾ ಬ್ಯಾಂಕ್ ವಿಲೀನದ ಬಗ್ಗೆ ಹಲವು ವರ್ಷಗಳ ಮೊದಲೇ ತಿಳಿಸಿದ್ದ ಭೋಜರಾಜ ವಾಮಂಜೂರು!
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

Photo: facebook.com/bhojaraj.vamanjoor/
ಸಾರ್ವಜನಿಕ ರಂಗದ 10 ಬ್ಯಾಂಕ್ ಗಳನ್ನು 4 ಬ್ಯಾಂಕ್ ಗಳಾಗಿ ವಿಲೀನಗೊಳಿಸಲಾಗುವುದು ಎಂದು ಇಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಈಗಾಗಲೇ ಕರಾವಳಿಯ ಅಚ್ಚುಮೆಚ್ಚಿನ ಬ್ಯಾಂಕ್ ಆಗಿದ್ದ ವಿಜಯಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನಗೊಂಡಿದೆ.
ಈ ರಾಜ್ಯದ ಜನರ ನೆಚ್ಚಿನ ಬ್ಯಾಂಕ್ ಗಳಾಗಿರುವ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ವಿಲೀನಗೊಳ್ಳಲಿದ್ದು, ಕೆನರಾ ಬ್ಯಾಂಕ್ ಮುಂದುವರಿಯಲಿದೆ. ಸಿಂಡಿಕೇಟ್ ಮತ್ತು ಕೆನರಾ ಬ್ಯಾಂಕ್ ವಿಲೀನದ ನಂತರ ಸಾಮಾಜಿಕ ಜಾಲತಾಣದಲ್ಲಿ ಈ ಎರಡೂ ಬ್ಯಾಂಕ್ ಗಳ ‘ಮದುವೆ’ಯ ಬಗ್ಗೆ ತಿಳಿಸಿದ್ದ ತುಳು ಕಲಾವಿದ ಭೋಜರಾಜ್ ವಾಮಂಜೂರು ಅವರ ಹಾಸ್ಯದೃಶ್ಯವೊಂದು ವೈರಲ್ ಆಗುತ್ತಿದೆ. ಈ ಎರಡೂ ಬ್ಯಾಂಕ್ ಗಳ ವಿಲೀನದ ಬಗ್ಗೆ ಭೋಜರಾಜ ವಾಮಂಜೂರು ಅವರಿಗೆ ಮೊದಲೇ ತಿಳಿದಿತ್ತು ಎಂದು ಸಾಮಾಜಿಕ ಜಾಲತಾಣದ ಬಳಕೆದಾರರು ಹಾಸ್ಯಚಟಾಕಿ ಹಾರಿಸುತ್ತಿದ್ದಾರೆ. ಇದು ಪ್ರಸಿದ್ಧ ತುಳು ನಾಟಕ ‘ಪುದರ್ ದೀತಿಜಿ’ಯ ದೃಶ್ಯವಾಗಿದೆ. (1.10 ನಿಮಿಷದಿಂದ)
ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ.
Next Story





