ಆ. 31 ರಿಂದ ಹಜ್ ಯಾತ್ರಾರ್ಥಿಗಳ ವಿಮಾನ ಮಂಗಳೂರಿಗೆ
ಮಂಗಳೂರು: ಸರಕಾರದ ಹಜ್ ಸಮಿತಿಯಿಂದ ಮಂಗಳೂರು ಹಜ್ ಕ್ಯಾಂಪ್ ಮೂಲಕ ಜು.17 ರಿಂದ ಏರ್ ಇಂಡಿಯಾ ಎಕ್ಸ್'ಪ್ರೆಸ್ ವಿಮಾನಗಳಲ್ಲಿ ಹಜ್'ಗೆ ತೆರಳಿದ್ದ 757 ಮಂದಿಯ ತಂಡವು ಆ.31 ರಿಂದ ಸೆ. 2 ರ ತನಕ ಜಿದ್ದಾ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ಮರಳಲಿದ್ದಾರೆ.
ಆ. 31 ರಂದು ಮೊದಲ ವಿಮಾನವು ಸೌದಿ ಸಮಯ ಬೆಳಗ್ಗೆ 6.45 ಕ್ಕೆ ಜಿದ್ದಾದಿಂದ ಹೊರಟು ಭಾರತೀಯ ಕಾಲಮಾನ 2.35 ಕ್ಕೆ ಹಾಗೂ ನಂತರದ ವಿಮಾನವು ಬೆಳಗ್ಗೆ 10.45 ಕ್ಕೆ ಹೊರಟು ಸಂಜೆ 6.35 ಕ್ಕೆ ಮಂಗಳೂರು ತಲುಪಲಿದೆ.
ಸೆ. 1 ರಂದು ಮಧ್ಯಾಹ್ನ ಹಾಗೂ ಸೆ. 2 ರಂದು ವಿಮಾನಗಳೂ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿವೆ. ಕೊನೆಯ ಕ್ಷಣದಲ್ಲಿ ಸಮಯದಲ್ಲಿ ಬದಲಾವಣೆಯಾಗುವ ಸಾಧ್ಯತೆಯೂ ಇದೆ ಎಂದು ಹಜ್ ನಿರ್ವಹಣಾ ಸಮಿತಿ ಮಂಗಳೂರು ಮಾಧ್ಯಮ ಕಾರ್ಯದರ್ಶಿ ರಶೀದ್ ವಿಟ್ಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





