ಮಂಗಳೂರು ತಾಲೂಕು ಮಟ್ಟದ ಅಂತರ್ ಪದವಿ ಪೂರ್ವ ಕಾಲೇಜ್ ವಾಲಿಬಾಲ್ ಪಂದ್ಯಾಟ

ಮಂಗಳೂರು : ಮಂಗಳೂರಿನ ಮಿಲಾಗ್ರೆಸ್ಸ್ ಪದವಿ ಪೂರ್ವ ಕಾಲೇಜ್ ಆಶ್ರಯದಲ್ಲಿ ಮಂಗಳೂರು ತಾಲೂಕು ಮಟ್ಟದ ಅಂತರ್ ಪದವಿ ಪೂರ್ವ ಕಾಲೇಜ್ ವಾಲಿಬಾಲ್ ಪಂದ್ಯಾಟವು ಮಂಗಳೂರಿನ ಮಂಗಳಾ ಸ್ಟೇಡಿಯಂ ನಲ್ಲಿ ಶುಕ್ರವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ರೇ. ಫಾ. ಜೋಸೆಫ್ ಲೋಬೊ ವಹಿಸಿದ್ದರು.
ಪಂದ್ಯಾಟದ ಉದ್ಘಾಟನೆಯನ್ನು ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಯ ಕ್ಯಾಂಪಸ್ ನಿರ್ದೇಶಕರಾದ ರೇ.ಫಾ. ಮೈಕಲ್ ಸಾಂತು ಮೇಯರ್ ನೆರವೇರಿಸಿದರು.
ಮಿಲಾಗ್ರೇಸ್ ಶಿಕ್ಷಣ ಸಂಸ್ಥೆಯ ರಕ್ಷಕ /ಶಿಕ್ಷಕ ಸಂಘದ ಅಧ್ಯಕ್ಷರಾದ ಇಬ್ರಾಹಿಂ ಕೊಣಾಜೆ ಮುಖ್ಯ ಅತಿಥಿಯಾಗಿ ಆಗಮಿಸಿ ಪಂದ್ಯಾಟಕ್ಕೆ ಶುಭ ಹಾರೈಸಿದರು. ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಜಾನ್ ಪಾಯಿಸ್ ಸ್ವಾಗತ ಭಾಷಣ ಮಾಡಿದರು.
ಪ್ರಾದ್ಯಾಪಕ ಕಿರಣ್ ಡಿಸೋಜಾ ವಂದಿಸಿದರೆ, ಪ್ರಾದ್ಯಾಪಕಿ ಪ್ರಿಯಾ ಎಂ ಕಾರ್ಯಕ್ರಮ ನಿರೂಪಿಸಿದರು. ಪಂದ್ಯಾಟದಲ್ಲಿ ಹುಡುಗರ ವಿಭಾಗದಲ್ಲಿ 27 ತಂಡಗಳು ಹಾಗೂ ಹುಡುಗಿಯರ ವಿಭಾಗದಲ್ಲಿ 13 ತಂಡಗಳು ಭಾಗವಹಿಸಿದ್ದವು.













