ಸ್ಕಿಮ್ಮಿಂಗ್ ಯಂತ್ರದಿಂದ ವಡೇರಹೋಬಳಿ ಎಂಟಿಎಂ ಹ್ಯಾಕ್: ಪಿನ್ ಸಂಖ್ಯೆ ಬದಲಾಯಿಸಲು ಸೂಚನೆ
ಉಡುಪಿ, ಆ.31: ಕುಂದಾಪುರ ವಡೇರಹೋಬಳಿಯ ಕಾರ್ಪೊರೇಷನ್ ಬ್ಯಾಂಕ್ ಎಟಿಎಂ ಸೆಂಟರ್‌ನ್ನು ಸ್ಕಿಮ್ಮಿಂಗ್ ಯಂತ್ರದ ಮೂಲಕ ಹ್ಯಾಕ್ ಮಾಡಿ ರುವ ಹಿನ್ನೆಲೆಯಲ್ಲಿ ಗ್ರಾಹಕರು ತಮ್ಮ ಎಟಿಎಂ ಕಾರ್ಡಿನ ರಹಸ್ಯ ಸಂಖ್ಯೆ ಬದ ಲಾಯಿಸಿಕೊಳ್ಳುವಂತೆ ಉಡುಪಿ ಜಿಲ್ಲಾ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಸೂಚನೆ ನೀಡಿದ್ದಾರೆ.
2019ರ ಜು.25ರಿಂದ ಆ.5ರ ಮಧ್ಯಾವಧಿಯಲ್ಲಿ ಒಬ್ಬ ಹ್ಯಾಕರ್ಸ್ ಈ ಎಟಿಎಂ ಸೆಂಟರ್‌ಗೆ ಹಲವು ಬಾರಿ ಆಗಮಿಸಿ ಎಂಟಿಎಂ ಯಂತ್ರದಲ್ಲಿ ಎಟಿಎಂ ಕಾರ್ಡ್ ಹ್ಯಾಕ್ ಮಾಡುವ ಸ್ಕಿಮ್ಮಿಂಗ್ ಯಂತ್ರವನ್ನು ಆಳವಡಿಸಿರುವುದು ಸೆನ್ ಪೊಲೀಸರು ಸೆಂಟರಿನ ಸಿಸಿಟಿವಿಯನ್ನು ಪರಿಶೀಸಿದಾಗ ಕಂಡುಬಂದಿದೆ. ಒಬ್ಬ ವ್ಯಕ್ತಿ ಸೆಂಟರಿಗೆ ಬೇರೆ ಬೇರೆ ದಿನಗಳಲ್ಲಿ ಆಗಮಿಸಿ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆಯ ವೇಳೆ ಸ್ಕಿಮ್ಮಿಂಗ್ ಮೆಶಿನ್‌ನ್ನು ಎಟಿಎಂ ಯಂತ್ರಕ್ಕೆ ಆಳವಡಿ ಸಿದ್ದು, ಸುಮಾರು ಅರ್ಧ ಗಂಟೆಗಳ ನಂತರ ಬಂದು ಆ ಸ್ಕಿಮ್ಮಿಂಗ್ ಮೆಶಿನ್‌ನ್ನು ಹಿಂದಕ್ಕೆ ಪಡೆದುಕೊಂಡು ಹೋಗಿದ್ದಾನೆ. ಈ ಮಧ್ಯೆ ಈ ಎಟಿಎಂ ಯಂತ್ರದಲ್ಲಿ ಹಣ ವಿತ್ ಡ್ರಾ ಮಾಡಿರುವ ಗ್ರಾಹಕರ ಎಟಿಎಂ ಕಾರ್ಡ್‌ಗಳು ಹ್ಯಾಕ್ ಆಗಿವೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಈ ಯಂತ್ರದ ಮೂಲಕ ಗ್ರಾಹಕರ ಕಾರ್ಡ್ ನಂಬರ್ ಸಹಿತ ರಹಸ್ಯ ಸಂಖ್ಯೆ ಗಳನ್ನು ಸ್ಕಾನ್ ಮಾಡಲಾಗುತ್ತದೆ. ಬಳಿಕ ನಕಲಿ ಕಾರ್ಡ್‌ಗಳನ್ನು ತಯಾರಿಸಿ ರಾತ್ರಿ ವೇಳೆ ಬೇರೆ ಬೇರೆ ಎಟಿಎಂ ಸೆಂಟರ್‌ಗಳಲ್ಲಿ ಆ ಕಾರ್ಡ್ ಮೂಲಕ ಗ್ರಾಹಕರ ಖಾತೆಯ ಹಣವನ್ನು ಡ್ರಾ ಮಾಡಲಾಗುತ್ತದೆ. ಇದಕ್ಕೆ ಒಟಿಪಿ, ಖಾತೆ ಹ್ಯಾಕ್ ಮಾಡುವ ಅಗತ್ಯ ಇರುವುದಿಲ್ಲ. ಹೀಗೆ ಹ್ಯಾಕರ್ಸ್ ಆ ಎಂಟಿಎಂ ಯಂತ್ರದಲ್ಲಿ ಹಣ ಪಡೆದ 10-15 ಮಂದಿ ಗ್ರಾಹಕರ ಲಕ್ಷಾಂತರ ರೂ. ಹಣವನ್ನು ಡ್ರಾ ಮಾಡಿ ವಂಚಿಸಿದ್ದಾನೆ. ಈ ಬಗ್ಗೆ ಉಡುಪಿ ಜಿಲ್ಲಾ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣ ಗಳು ದಾಖಲಾಗಿವೆ. ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪರಿಶೀಲಿಸಿದಾಗ ಎಂಟಿಎಂ ಯಂತ್ರವನ್ನು ಹ್ಯಾಕ್ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಆದುದರಿಂದ ಈ ಎಟಿಎಂ ಸೆಂಟರ್‌ನಲ್ಲಿ ಹಣ ವಿತ್ ಡ್ರಾ ಮಾಡಿರುವ ಎಲ್ಲ ಗ್ರಾಹಕರು ಕೂಡಲೇ ತಮ್ಮ ತಮ್ಮ ಎಟಿಎಂ ಕಾರ್ಡಿನ ರಹಸ್ಯ ಸಂಖ್ಯೆ ಯನ್ನು(4 ಡಿಜಿಟ್) ಬದಲಾಯಿಸಿಕೊಳ್ಳಬೇಕು ಅಥವಾ ಕಾರ್ಡ್ ಬ್ಲಾಕ್ ಮಾಡಬೇಕು ಎಂದು ಜಿಲ್ಲಾ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸೀತಾರಾಮ್ ತಿಳಿಸಿದ್ದಾರೆ.







