ಗಾಂಜಾ ಸೇವನೆ: ಇಬ್ಬರು ವಶಕ್ಕೆ
ಮಣಿಪಾಲ, ಆ.31: ಮಣಿಪಾಲದಲ್ಲಿ ಬಳಿ ಗಾಂಜಾ ಸೇವನೆಗೆ ಸಂಬಂಧಿಸಿ ಉಡುಪಿ ಡಿಸಿಐಬಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆ.29ರಂದು ಮಧ್ಯಾಹ್ನ ವೇಳೆ 80 ಬಡಗುಬೆಟ್ಟು ಗ್ರಾಮದ ಆದರ್ಶನಗರ ಎಂಬಲ್ಲಿ ಅವಿನಾಶ್(27) ಹಾಗೂ ಆ.30ರಂದು ಮಧ್ಯಾಹ್ನ ಅಲೆವೂರು ಪಗ್ರತಿನಗರ ಬಸ್ ನಿಲ್ದಾಣದ ಬಳಿ ರಾಜೀವನಗರದ ಗಣಪತಿ ಎ.(26) ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲ ಪ್ರಕರಣ ದಾಖಲಾಗಿದೆ.
Next Story





