ದ.ಕ. ಜಿಲ್ಲೆಯ ಜನತೆಯ ಸ್ವಾಭಿಮಾನದ ಸಂಕೇತವಾದ ಬ್ಯಾಂಕ್‌ಗಳಿಗೆ ಬಿಜೆಪಿ ಕೊಡಲಿ ಏಟು- ವೀರಪ್ಪ ಮೊಯ್ಲಿ
ಮಂಗಳೂರು, ಅ.31:ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿದ ಈ ಜಿಲ್ಲೆಯ ಸ್ವಾಭಿಮಾನದ ಸಂಕೇತ ಅವುಗಳಿಗೆ ಬಿಜೆಪಿ ವಿಲೀನಗೊಳಿಸುವ ಮೂಲಕ ಕೊಡಲಿ ಏಟು ನೀಡಿದೆ ಎಂದು ಮಾಜಿ ಮುಖ್ಯ ಮಂತ್ರಿ ಎಂ.ವೀರಪ್ಪಮೊಯ್ಲಿ ಟೀಕಿಸಿದರು.
ಅವರು ನಗರದ ಪುರಭವನದಲ್ಲಿಂದು ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದರು.ದಕ್ಷಿಣ ಕನ್ನಡ ಜಿಲ್ಲೆ ಬ್ಯಾಂಕುಗಳ ತೊಟ್ಟಿಲಾಗಿತ್ತು ಜಿಲ್ಲೆಯ 50 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದ ಇಲ್ಲಿನ ಬ್ಯಾಂಕುಗಳನ್ನು ಇಲ್ಲಿನ ಹಿರಿಯರು ಕಷ್ಟಪಟ್ಟು ಬ್ಯಾಂಕ್‌ಗಳನ್ನು ಕಟ್ಟಿದ್ದಾರೆ. ಸಾವಿರಾರು ಜನರಿಗೆ ಬ್ಯಾಂಕು ಉದ್ಯೋಗ ನಿಡುತ್ತಾ ಬಂದಿದೆ. ಇಂದಿರಾ ಗಾಂಧಿ ಬಡವರಿಗೆ ಬ್ಯಾಂಕ್ ಸೇವೆ ದೊರೆಯಲು ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಿದರು.ಬ್ಯಾಂಕ್ ಸ್ಥಾಪನೆ ಮಾಡಿದ ಜನರನ್ನು ಮರೆಯವುದು ಸರಿಯಲ್ಲ ಎಂದು ವೀರಪ್ಪ ಮೊಯ್ಲಿ ತಿಳಿಸಿದರು.
ಇಂದಿರಾ ಗಾಂಧಿ ಯೂ ಸೋತು ಮತ್ತೆ ಗೆದ್ದು ಪ್ರಧಾನಿಯಾಗಿದ್ದಾರೆ.ಅವರ ಬಲಿದನ ದೇಶಕ್ಕಾಗಿ ಆಗಿದೆ. ರಾಜೀವ ಗಾಂಧಿಯ ಬಲಿದನವೂ ದೇಶಕ್ಕಾಗಿ ಆಗಿದೆ. ಅಧಿಕಾರದ ಹಂಚಿಕೆಗಾಗಿ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ನೀಡುವ ಕಾಯಿದೆ,ಊಳುವವನೆ ಹೊಲದೊಡೆಯ ಯೋಜನೆಗಳು, ರಾಜ್ಯದಲ್ಲಿ ಸಿಇಟಿ ಯ ಮೂಲಕ ಬಡವರ ಮಕ್ಕಳು ಡಾಕ್ಟರ್,ಇಂಜಿನಿಯರ್ ಆಗಲು ಸಾಧ್ಯವಾಗಿದೆ ಇವೆಲ್ಲಾ ಕಾಂಗ್ರೆಸ್ ಸರಕಾರದ ಕೊಡುಗೆ ಎನ್ನುವುದನ್ನು ನಾನು ಮತ್ತೆ ಜನರಿಗೆ ನೆನಪಿಸಬೇಕಾಗಿದೆ ಎಂದು ವೀರಪ್ಪ ಮೊಯ್ಲಿ ತಿಳಿಸಿದರು.







