ಪರಿಷತ್ ಸದಸ್ಯನ ಪಾಸು ದುರುಪಯೋಗ: ದೂರು
ಬೆಂಗಳೂರು, ಆ.31 ವಿಧಾನ ಪರಿಷತ್ ಸದಸ್ಯರು ಉಪಯೋಗಿಸುವ ವಾಹನಗಳ ಪಾಸು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಪರಿಷತ್ ಸದಸ್ಯ ಸಿ.ಆರ್.ಮನೋಹರ್ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಾಗರಾಜ್ ಹಾಗೂ ಅರುಣ್‌ಕುಮಾರ್ ಎಂಬುವವರು ಪಾಸ್ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಮಾಡಿದ್ದಾರೆ.
ಆರೋಪಿಗಳು ತಮ್ಮ ಸ್ಕಾರ್ಪಿಯೋ ವಾಹನಕ್ಕೆ ನಕಲಿ ಪಾಸ್ ಅಂಟಿಸಿ ಸಿ.ಆರ್.ಮನೋಹರ್ ಹೆಸರಿನಲ್ಲಿ ಬಳಸುತ್ತಿದ್ದರು. ಈ ಕಾರಿನಲ್ಲಿ ಬೆಂಗಳೂರಿನ ವ್ಯಕ್ತಿಯೊಬ್ಬ ಮಂಗಳೂರಿಗೆ ಪ್ರಯಾಣ ಮಾಡುತ್ತಿದ್ದ.
ಈ ವೇಳೆ ಮಂಗಳೂರಿನ ನಗರ ಪೊಲೀಸರು ತಪಾಸಣೆ ಮಾಡಿದಾಗ ಪರಿಷತ್ ಸದಸ್ಯರ ವಾಹನಕ್ಕೆ ನೀಡಲಾಗುವ ಪಾಸ್ ಕಂಡು ಬಂದಿದೆ. ಆಗ ಪೊಲೀಸರು ಮನೋಹರ್ ಅವರಿಗೆ ಮಾಹಿತಿ ನೀಡಿದ್ದಾರೆ. ನನ್ನ ಹೆಸರನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ದೂರು ಸಲ್ಲಿಸಲಾಗಿದೆ ಎಂದು ಮನೋಹರ್ ಸುದ್ದಿಗಾರರಿಗೆ ತಿಳಿಸಿದರು.
Next Story





