ಗೌರಿ-ಗಣೇಶ ಹಬ್ಬ: 271 ಪೊಲೀಸರಿಗೆ ಮುಂಭಡ್ತಿ
ಬೆಂಗಳೂರು, ಆ.31: ಗೌರಿ ಗಣೇಶ ಹಬ್ಬದ ಪ್ರಯುಕ್ತ ಜೇಷ್ಠತೆಯ ಅನ್ವಯ 271 ಪೊಲೀಸರಿಗೆ ಮುಂಭಡ್ತಿ ನೀಡಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.
ಅತ್ಯಂತ ಪಾರದರ್ಶಕ ಮತ್ತು ಕೌನ್ಸಿಲಿಂಗ್ ಮುಖಾಂತರ ಎಚ್‌ಸಿ ಹುದ್ದೆಯಿಂದ ಎಎಸ್ಸೈ ಹುದ್ದೆಗೆ 94 ಅಧಿಕಾರಿಗಳಿಗೆ (ವೇತನ ಶ್ರೇಣಿ-27650-52650). ಅದೇ ರೀತಿ, ಪಿಸಿ ಹುದ್ದೆಯಿಂದ 177 ಎಚ್‌ಸಿ ಹುದ್ದೆಗೆ (ವೇತನ ಶ್ರೇಣಿ-23500-47650) ಮುಂಭಡ್ತಿ ನೀಡಿ ಆದೇಶಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story