ಬೆಂಗಳೂರು: ವಿದೇಶಿ ಪ್ರಜೆಗಳ ಬಂಧನ
![ಬೆಂಗಳೂರು: ವಿದೇಶಿ ಪ್ರಜೆಗಳ ಬಂಧನ ಬೆಂಗಳೂರು: ವಿದೇಶಿ ಪ್ರಜೆಗಳ ಬಂಧನ](https://www.varthabharati.in/sites/default/files/images/articles/2019/08/31/207944-1567274360.gif)
ಬೆಂಗಳೂರು, ಆ.31: ವೀಸಾ ಅವಧಿ ಮುಗಿದರೂ ನಗರದಲ್ಲಿ ಅಕ್ರಮವಾಗಿ ವಾಸವಾಗಿದ್ದ ಎಂಟು ಮಂದಿ ವಿದೇಶಿ ಪ್ರಜೆಗಳನ್ನು ಹೆಣ್ಣೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಅಕ್ರಮವಾಗಿ ವಿದೇಶಿ ಪ್ರಜೆಗಳು ನೆಲೆಯೂರಿರುವ ಮಾಹಿತಿ ಮೇರೆಗೆ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು, ಸುಮಾರು 150ಕ್ಕೂ ಅಧಿಕ ವಿದೇಶಿಯರ ವೀಸಾ ಹಾಗೂ ಪಾಸ್ ಪೋರ್ಟ್ ಪರಿಶೀಲನೆ ನಡೆಸಿದರು.
ಈ ವೇಳೆ 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಉಗಾಂಡ, ನೈಜಿರೀಯಾ ಹಾಗೂ ಆಫ್ರಿಕಾ ಮೂಲದವರಾಗಿದ್ದು, ವ್ಯಾಪಾರ, ಪ್ರವಾಸ ಹಾಗೂ ಶಿಕ್ಷಣ ವೀಸಾದಡಿ ನಗರಕ್ಕೆ ಬಂದಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story