ಸೌದಿ: ಕೈಗಾರಿಕೆ, ಖನಿಜ ಸಂಪನ್ಮೂಲ ಸಚಿವಾಲಯ ರಚನೆ

ರಿಯಾದ್, ಆ. 31: ಸೌದಿ ಅರೇಬಿಯದಲ್ಲಿ ಹೊಸದಾಗಿ ಕೈಗಾರಿಕೆ ಮತ್ತು ಖನಿಜ ಸಂಪನ್ಮೂಲಗಳು ಎಂಬ ಹೊಸ ಸಚಿವಾಲಯವನ್ನು ಸೃಷ್ಟಿಸಿ ದೊರೆ ಸಲ್ಮಾನ್ ಶುಕ್ರವಾರ ಆದೇಶವೊಂದನ್ನು ಹೊರಡಿಸಿದ್ದಾರೆ. ಅದರ ಉಸ್ತುವಾರಿಯನ್ನು ಬಂದರ್ ಅಲ್-ಖುರಾಯಿಫ್ ವಹಿಸಿಕೊಳ್ಳಲಿದ್ದಾರೆ.
ಇಂಧನ, ಕೈಗಾರಿಕೆ ಮತ್ತು ಖನಿಜ ಸಂಪನ್ಮೂಲ ಸಚಿವಾಲಯಕ್ಕೆ ಇಂಧನ ಸಚಿವಾಲಯ ಎಂಬ ಹೆಸರಿಡಲಾಗಿದೆ.
ಇಂಧನ ಸಚಿವಾಲಯವು ಪ್ರಸಕ್ತ ಹಣಕಾಸು ವರ್ಷದ ಅಂತ್ಯದವರೆಗೆ ಇಂಧನ, ಕೈಗಾರಿಕೆ ಮತ್ತು ಖನಿಜ ಸಂಪನ್ಮೂಲ ಸಚಿವಾಲಯದ ಕೆಲಸ ಮತ್ತು ಜವಾಬ್ದಾರಿಗಳನ್ನು ನಿಭಾಯಿಸುತ್ತದೆ. ಬಳಿಕ ಈ ಕೆಲಸ ಮತ್ತು ಜವಾಬ್ದಾರಿಗಳನ್ನು ನೂತನ ಕೈಗಾರಿಕೆ ಮತ್ತು ಖನಿಜ ಸಂಪನ್ಮೂಲಗಳ ಸಚಿವಾಲಯ ವಹಿಸಿಕೊಳ್ಳಲಿದೆ.
Next Story





